ಎಲ್ಲ ಬಿಜೆಪಿ ನಾಯಕರಿಗಿಂತ ಉನ್ನತ ಹಿಂದೂ ನಾನು… ದಿಗ್ವಿಜಯ್ ಸಿಂಗ್

0
307

ಸನ್ಮಾರ್ಗ ವಾರ್ತೆ

ಭೋಪಾಲ್: ನನ್ನ ಪಾರ್ಟಿ ಆಳ್ವಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸಲಾಗುವುದಿಲ್ಲ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್ ಹೇಳಿದರು.

ಆದರೆ ಗಲಭೆ ದಂಗೆಗಳಲ್ಲಿ ಪಾಲ್ಗೊಂಡ ವ್ಯಕ್ತಿಗಳು ಕಾನೂನಿನ ಹೊಡೆತ ಅನುಭವಿಸಬೇಕು ಎಂದು ಅವರು ಎಚ್ಚರಿಕೆ ನೀಡಿದರು. ಹಿಂದುತ್ವ ವಿಷಯದಲ್ಲಿ ಹೆಚ್ಚು ಸ್ಪರ್ಶಿಸಿದ ಬಿಜೆಪಿ ನಾಯಕರಿಗಿಂತ ನಾನು ಉನ್ನತ ಹಿಂದೂ ಆಗಿದ್ದೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದರು.

ಬುಧವಾರ ಭೋಪಾಲದಲ್ಲಿ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತಾಡುತ್ತಿದ್ದರು. ತನ್ನ ಪಾರ್ಟಿ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುವುದಿಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಮರಳಿದರೆ ಬಜರಂಗದಳವನ್ನು ನಿಷೇಧಿಸಲಾಗುವುದೇ ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

ಬಜರಂಗದಳದಲ್ಲೂ ಕೆಲವು ಉತ್ತಮ ಜನರಿಬಹುದು. ಆದುದರಿಂದ ನಾವು ಅದನ್ನು ನಿಷೇಧಿಸುವುದಿಲ್ಲ. ಆದರೆ ಗಲಭೆ ಮಾಡುವ ಯಾರನ್ನು ಬಿಡುವುದಿಲ್ಲ ಎಂದು ಅವರು ಹೇಳಿದರು.

ನಾನು ಹಿಂದೂ ಆಗಿದ್ದೇನೆ. ಹಿಂದೂವಾಗಿಯೇ ಇರುತ್ತೇನೆ. ನಾನು ಹಿಂದೂ ಧರ್ಮ ಅನುಸುರಿಸುವವನು. ನಾನು ಸನಾತನ ಧರ್ಮದ ಅನುಯಾಯಿಯಾಗಿರುವೆನು. ಎಲ್ಲ ಬಿಜೆಪಿ ನಾಯಕರಿಗಿಂತ ಉನ್ನತ ಹಿಂದೂ ನಾನು ಎಂದು ಅವರು ಹಕ್ಕುವಾದ ವ್ಯಕ್ತಪಡಿಸಿದರು.

ಭಾರತ ಎಂಬ ದೇಶ ಹಿಂದೂ, ಮುಸ್ಲಿಂ, ಸಿಕ್ಖ್ ಕ್ರೈಸ್ತರೆಲ್ಲರದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾನ್ ದೇಶವನ್ನು ವಿಭಜಿಸುವುದನ್ನು ನಿಲ್ಲಿಸಬೇಕೆಂದು ದಿಗ್ವಿಜಯ್ ಸಿಂಗ್ ಹೇಳಿದರು.