ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ?; ಕ್ಷೇತ್ರ ಯಾವುದೇ ಇರಲಿ, ಪ್ರಿಯಾಂಕಾಗೆ ಗೆಲುವು ಎಂದ ಶಿವಸೇನೆ

0
545

ಸನ್ಮಾರ್ಗ ವಾರ್ತೆ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಪ್ರಿಯಾಂಕಾ ಗಾಂಧಿ ಅವರಿಗೆ ಅವಕಾಶ ನೀಡಿದರೆ ಖಂಡಿತವಾಗಿಯೂ ಗೆಲ್ಲುತ್ತಾರೆ ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ. ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ವಾರಣಾಸಿ ಮೋದಿಯವರ ಭದ್ರಕೋಟೆಯಾಗಿದೆ. ಎರಡು ಲೋಕಸಭಾ ಚುನಾವಣೆಯಲ್ಲಿ ಮೋದಿ ಇಲ್ಲಿಂದ ಗೆದ್ದಿದ್ದರು.

ಪ್ರಿಯಾಂಕ ಗಾಂಧಿ ಅಮೇಠಿ ಅಥವಾ ವಾರಣಾಸಿಯಿಂದ ಸ್ಪರ್ಧಿಸಬಹುದಾಗಿದೆ. ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲುವು ಖಚಿತ ಎಂದು ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಹೇಳಿದರು.

ವಿಶಾಲ ಪ್ರತಿಪಕ್ಷ ಸಖ್ಯ ‘ಇಂಡಿಯ’ ಕೇಂದ್ರ ಗೃಹ ಸಚಿವ, ಪ್ರಧಾನಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂಡಿಯ ಸಖ್ಯದ ಕುರಿತು ಪಾರ್ಲಿಮೆಂಟಿನಿಂದ ಹಿಡಿದು ಕೆಂಪು ಕೋಟೆಯವರೆಗೆ ಮೋದಿ ಟೀಕೆ ಮಾಡಿದ್ದು ಈ ತಲೆನೋವು ಸೃಷ್ಟಿಸಿರುವುದಕ್ಕೆ ಸೂಚನೆಯಾಗಿದ್ದು, ಇದರಲ್ಲಿ ಇಪ್ಪತ್ತಾರು ಪಕ್ಷಗಳಿವೆ. ಅವರೆಲ್ಲರ ಶಾಸಕರ ಮತದಾರರ, ಸಂಸದರ ಮತಗಳು ಒಟ್ಟು ಸೇರುವುದು ಲೋಕಸಭಾ ಚುನಾವಣೆಯಲ್ಲಿ ಖಚಿತವಾಗಿದೆ.

ಆಗಸ್ಟ್ 31ಕ್ಕೆ ಇಂಡಿಯದ ಮೂರನೇ ಹಂತದ ರಾಷ್ಟ್ರಮಟ್ಟದ ಸಭೆ ನಡೆಯಲಿದ್ದು, ಪ್ರಥಮ ಸಭೆ ಬಿಹಾರದಲ್ಲಿ ಎರಡನೇ ಸಭೆ ಬೆಂಗಳೂರಿನಲ್ಲಿ ಮತ್ತು ಮುಂದಿನ ಸಭೆ ಮುಂಬಯಿಯಲ್ಲಿ ನಡೆಯಲಿದೆ.