ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಆ.19: ಮಣಿಪುರದಲ್ಲಿ ಜಿ20 ಸಮ್ಮೇಳನ ನಡೆಸಿ ತೋರಿಸಲಿ ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಸವಾಲು ಹಾಕಿದ್ದಾರೆ.
ಮಣಿಪುರದ ಪರಿಸ್ಥಿತಿ ಶಾಂತವಾಗಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಮಣಿಪುರದಲ್ಲಿ ಶಾಂತಿ ನೆಲೆಸಿದ್ದರೆ ಅಲ್ಲಿಯೇ ಜಿ20 ಸಮ್ಮೇಳನ ನಡೆಸಬಾರದೇಕೆ ಎಂದು ಅಖಿಲೇಶ್ ಯಾದವ್ ಪ್ರಶ್ನಿಸಿದರು.
ಉತ್ತರ ಪ್ರದೇಶದ ಮತ್ತು ದೇಶದ ವಿವಿಧ ಕಡೆಗಳಲ್ಲಿ ಹಲವು ಸಮ್ಮೇಳನಗಳು ನಡೆದಿವೆ. ಮಣಿಪುರದಲ್ಲಿ ಇಂತಹ ಸಮ್ಮೇಳನ ನಡೆದಿಲ್ಲ. ಯಾಕೆ ಮಣಿಪುರದಲ್ಲಿ ಸಮ್ಮೇಳನ ನಡೆಸುವುದಿಲ್ಲ ಎಂದು ಅವರು ಕೇಳಿದರು. ಇಂತಹ ಕಾರ್ಯಕ್ರಮಗಳಿಂದ ಲಾಭ ಎತ್ತುವುದು ಬಿಜೆಪಿಯ ಉದ್ದೇಶವಾಗಿದ್ದರೆ ಅವರು ಸ್ಪೋನ್ಸರ್ ಮಾಡಲಿ ಎಂದು ಯಾದವ್ ಕುಟುಕಿದರು.
ಜಿ20 ಸಮ್ಮೇಳನ ದಿಲ್ಲಿಯಲ್ಲಿ ನಡೆಸುವುದಕ್ಕೆ ಸಮಸ್ಯೆಯಿಲ್ಲ. ಆದರೆ ಮಣಿಪುರದಲ್ಲಿ ಸಮ್ಮೇಳನ ನಡೆಸುವುದು ಸವಾಲು ಆಗಿದೆ. ರಾಜಕೀಯದಲ್ಲಿ ಕುಟುಂಬ ಪ್ರಾಬಲ್ಯ ಇದೆ ಎಂದು ಮೋದಿ ಹೇಳುತ್ತಾರೆ. ಕುಟುಂಬಾಡಳಿತದ ಬಗ್ಗೆ ಕೇಳಿದ ಪ್ರಶ್ನೆಗೆ ಜನರು ನಮ್ಮನ್ನು ಗೆಲ್ಲಿಸಿದ್ದಾರೆ. ಅದರಲ್ಲಿ ಕುಟುಂಬದ ಪಾತ್ರವಿಲ್ಲ ಎಂದು ಹೇಳಿದರು.












