ಬೆಳಗ್ಗಿನ ಉಪಹಾರ ಯೋಜನೆಯನ್ನ ಅಣಕಿಸಿದ ದಿನಮಲರ್ ಪತ್ರಿಕೆಯ ವಿರುದ್ಧ ವ್ಯಾಪಕ ಪ್ರತಿಭಟನೆ

0
446

ಸನ್ಮಾರ್ಗ ವಾರ್ತೆ

ಚೆನ್ನೈ: ಶಾಲೆಯ ಮಕ್ಕಳಿಗೆ ಬೆಳಗ್ಗೆ ಉಪಹಾರ ಕೊಡುವ ಯೋಜನೆಯನ್ನು ದಿನಮಲರ್ ಪತ್ರಿಕೆ ಟೀಕಿಸಿದ್ದು ಇದರ ವಿರುದ್ಧ ತಮಿಳ್ನಾಡಿನ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆದಿದೆ. ಅಲ್ಲಲ್ಲಿ ಜನ ಈ ಪತ್ರಿಕೆಯನ್ನು ಸುಟ್ಟು ಹಾಕುತ್ತಿದ್ದಾರೆ. ಪತ್ರಿಕೆ ಬೋರ್ಡ್, ಬ್ಯಾನರ್ ಗಳನ್ನು ನಾಶಪಡಿಸಿದರು.

ಪತ್ರಿಕೆಯ ಈ ನರಿ ಬುದ್ಧಿಗೆ ಮುಖ್ಯಮಂತ್ರಿ ಸ್ಟಾಲಿನ್ , ಸಚಿವರು ಮತ್ತು ಪ್ರಮುಖರು ಕಟುವಾದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕ ಶಾಲೆಯ ಮಕ್ಕಳಿಗೆ ರಾಜ್ಯ ಸರಕಾರ ಬೆಳಗಿನ ಉಪಹಾರ ಕೊಡುವುದಕ್ಕೆ ಆರಂಭಿಸಿತ್ತು. ಅದನ್ನು ಸರಕಾರ ಇತ್ತೀಚೆಗೆ ವ್ಯಾಪಕಗೊಳಿಸಿತ್ತು. 31,008 ಶಾಲೆಗಳ 17 ಲಕ್ಷ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಉಪಹಾರ ಯೋಜನೆಯ ಮಾತ್ರ ಸಿಗುತ್ತಿದೆ ಎಂದು ಪತ್ರಿಕೆ ಅಣಕಿಸಿತ್ತು. ಯೋಜನೆ ಜಾರಿಗೆ ಬಂದ ಮೇಲೆ ಶಾಲೆಯ ಶೌಚಾಲಯ ತುಂಬಿ ಹರಿಯುತ್ತಿದೆ ಎಂದು ಕೆಟ್ಟ ಭಾಷೆಯನ್ನು ಕೂಡ ದಿನಮಲರ್ ಬಳಸಿತ್ತು. ಇದು ಜನರನ್ನು ಕುಪಿತಗೊಳಿಸಿದ್ದೆಂದು ವರದಿ ತಿಳಿಸಿತು.

ದಿನಮಲರ್ ಸಂಘಪರಿವಾರದ ಬೆಂಬಲಿಗ ಪತ್ರಿಕೆ . ಬೆಳಗ್ಗೆ ಉಪಹಾರದ ಯೋಜನೆಯ ವಿರುದ್ಧ ಮುಖಪುಟದಲ್ಲಿ ಸುದ್ದಿ ಪ್ರಕಟಿಸಿತ್ತು. ಮನೆಯಲ್ಲಿ ತಿಂದು ಶಾಲೆಗೆ ಬಂದು ಉಪಹಾರ ತಿನ್ನುವುದರಿಂದ ಮಕ್ಕಳಿಗೆ ಶುಚೀಕರಣ ಕೊಠಡಿ ಹೆಚ್ಚು ಉಪಯೋಗಿಸಬೇಕಾಗಿ ಬರುತ್ತಿದೆ ಎಂದು ಅದು ವರದಿ ಮಾಡಿದೆ. ವಿದ್ಯಾರ್ಥಿಗಳು ಮನೆಯಿಂದ ಆಹಾರ ಕೊಡದೆ ಕಳುಹಿಸಿ ಎಂದು ತ್ರಿಚ್ಚಿಯ ಶಾಲೆಯ ಹೇಳಿಕೆಯನ್ನು ಈ ವರದಿಯಲ್ಲಿ ಸೇರಿಸಲಾಗಿತ್ತು. ಇದು ವ್ಯಾಪಕವಾಗಿ ವೈರಲಾಗಿತ್ತು. ನಂತರ ಜನ ಪ್ರತಿಭಟನೆಗಿಳಿದರು ಎನ್ನಲಾಗಿದೆ.