ಒಂದು ರಾಜ್ಯ, ಒಂದು ಚುನಾವಣೆ ; ಭಾರತವನ್ನು ಅಧ್ಯಕ್ಷೀಯ ಆಡಳಿತಕ್ಕೆ ಕೊಂಡು ಹೋಗುವ ಯತ್ನ- ಸ್ಟಾಲಿನ್

0
432

ಸನ್ಮಾರ್ಗ ವಾರ್ತೆ

ಚೆನ್ನೈ,ಸೆ. 4: ಚುನಾವಣೆಗಳನ್ನು ಏಕೀಕರಿಸುವ ಕೇಂದ್ರದ ಒಂದು ರಾಜ್ಯ, ಒಂದು ಚುನಾವಣೆ ಎಂಬುದು ಭಾರತವನ್ನು ಅಧ್ಯಕ್ಷೀಯ ಆಡಳಿತಕ್ಕೆ ಗುರಿಪಡಿಸುವ ಯತ್ನವಾಗಿದೆ ಎಂದು ತಮಿಳ್ನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದರು.

ಒಂದು ದೇಶ ಒಂದು ಚುನಾವಣೆ ನಂತರ ಬಿಜೆಪಿಯ ಮುಂದಿನ ಘೋಷಣೆ ಒಂದು ದೇಶ ಒಂದು ಅಧ್ಯಕ್ಷ ಎಂದಾಗಿರುತ್ತದೆ ಎಂದು ಹೇಳಿದ ಅವರು ಭಾರತದ ರಾಜಕೀಯವನ್ನ ವನ್‍ಮ್ಯಾನ್ ಶೋ ಮಾಡುವ ಬಿಜೆಪಿಯ ಪ್ರಯತ್ನ ಇದು ಎಂದು ಆರೋಪಿಸಿದರು.

ಒಂದು ರಾಜ್ಯ ಒಂದು ಚುನಾವಣೆ ಎಂಬ  ಪರಿಸ್ಥಿತಿ ಬಂದರೆ ಡಿಎಂಕೆಯಂತಹ ಪಾರ್ಟಿಗಳಿಗೆ ಕೆಲಸ ಮಾಡದ ಸ್ಥಿತಿ ಬರುತ್ತದೆ ಎಂದು ಸ್ಟಾಲಿನ್ ಬೆಟ್ಟು ಮಾಡಿದರು. ಎಐಎಡಿಎಂಕೆಗೆ ಇದೇ ಪರಿಸ್ಥಿತಿ ಆಗಬಹುದು. ಒಂದು ರಾಜ್ಯ ಒಂದು ಚುನಾವಣೆಯನ್ನು ಈಗ ಬೆಂಬಲಿಸುವುದು ಸ್ವಯಂ ಬಲಿ ಕುರಿಯಾಗುತ್ತೇವೆ ಎಂದು ಗೊತ್ತಿಲ್ಲದಾಗಿದೆ ಎಂದು ಸ್ಟಾಲಿನ್ ತಿಳಿಸಿದರು.

ಒಂದು ರಾಜ್ಯ ಒಂದು ಚುನಾವಣೆಗಾಗಿ 2021ರಲ್ಲಿ ತಮಿಳ್ನಾಡಿನಲ್ಲಿ ಅಧಿಕಾರಕ್ಕೆ ಬಂದ ಡಿಎಂಕೆ ಸರಕಾರವನ್ನು ವಿಸರ್ಜಿಸಲಾಗುವುದೇ? ಕೇರಳ ಕರ್ನಾಟಕ ಪಶ್ಚಿಮ ಬಂಗಾಳದ ಸರಕಾರವನ್ನು ವಿಸರ್ಜಿಸಲಾಗುವುದೇ? ಒಂದು ರಾಜ್ಯ ಒಂದು ಚುನಾವಣೆಯಲ್ಲಿ ಯಾವುದಾದರೊಂದು ರಾಜ್ಯದಲ್ಲಿ ಸರಕಾರಕ್ಕೆ ಸಾಧ್ಯವಾಗದಿದ್ದರೆ ಏನು ಮಾಡುವುದು? ಮುಂದಿನ ಪಾರ್ಲಿಮೆಂಟು ಚುನಾವಣೆಯಲ್ಲಿ ಅಲ್ಲಿ ಅಧ್ಯಕ್ಷೀಯ ಅಧಿಕಾರ ಬರುತ್ತದೆಯೇ? ಎಂದು ಸ್ಟಾಲಿನ್ ಕೇಳಿದರು.

ಕಳೆದ ದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದು ದೇಶ ಒಂದು ಚುನಾವಣೆಯನ್ನು ವಿರೋಧಿಸಿದ್ದರು. ಭಾರತದ ಒಕ್ಕೂಟ ಮತ್ತು ರಾಜ್ಯಗಳ ಮೇಲಿನ ದಾಳಿ ಇದು ಎಂದರು. ಒಂದು ರಾಜ್ಯ ಒಂದು ಚುನಾವಣೆ ಎಂಬುದು ಭಾರತದ ರಾಜ್ಯಗಳ ಒಕ್ಕೂಟದಲ್ಲಿ ಎಷ್ಟು ಸರಿ ಎಂದು ನೆನಪಿಸಿದ್ದರು.

ಒಂದು ರಾಜ್ಯ ಒಂದು ಚುನಾವಣೆಯ ವಿಷಯದಲ್ಲಿ ಅಧ್ಯಯನ ನಡೆಸಲು ಕೇಂದ್ರ ಸರಕಾರ ಸಮಿತಿ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳಿಂದ ಟೀಕೆ ಎದುರಾಗಿದೆ. ಮಾಜಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಸಮಿತಿ ಅಧ್ಯಕ್ಷರಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ , 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್‍ಕೆ ಸಿಂಗ್ , ಮಾಜಿ ಲೋಕಸಭಾ ಪ್ರಧಾನ ಕಾರ್ಯದರ್ಶಿ ಸುಭಾಶ್ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ, ಮಾಜಿ ಚೀಫ್ ವಿಜಿಲೆನ್ಸ್ ಕಮಿಶನರ್ ಸಂಜಯ್ ಕೊಠಾರಿ ಸಮಿತಿಯಲ್ಲಿದ್ದಾರೆ. ಕಾನೂನು ಸಚಿವ ಅರ್ಜುನ್ ರಾಂ ಮೇಘವಾಲ್ ಉನ್ನತ ಮಟ್ಟದ ಸಭೆಯಲ್ಲಿ ವಿಶೇಷ ಆಹ್ವಾನಿತರು ಆಗಿರುತ್ತಾರೆ.

ಕಾಂಗ್ರೆಸ್ ಲೋಕಸಭಾ ನಾಯಕ ಅಧೀರ್ ರಂಜನ್ ಚೌಧರಿಯವರನ್ನು ಸಮಿತಿಗೆ ಸೇರಿಸಿದರೂ ತಾನು ಸಮಿತಿಗಿಲ್ಲ ಎಂದು ಹೇಳಿದ್ದಾರೆ. ಒಂದು ಮತದಾರ ಪಟ್ಟಿ ಒಂದೇ ಗುರುತು ಕಾರ್ಡು ಉಪಯೋಗಿಸಿ ಲೋಕಸಭೆಗೂ ರಾಜ್ಯದ ವಿಧಾನಸಭೆಗೂ ಜೊತೆಗೆ ಮುನ್ಸಿಪಾಲಿಟಿ, ಪಂಚಾಯತಿಗೂ ಚುನಾವಣೆ ನಡೆಸುವುದನ್ನು ಅಧ್ಯಯನ ಮಾಡುವುದು ಅದಕ್ಕೆ ಬೇಕಾದ ಸಂವಿಧಾನ- ತಿದ್ದುಪಡಿಗಳನ್ನು ಶಿಫಾರಸ್ಸು ಮಾಡುವುದು ಸಮಿತಿಯ ಕೆಲಸವಾಗಿದೆ.