ಇಂಡಿಯ ಹೆಸರು ಬದಲಾವಣೆ ವಿರೋಧಿಸುವವರು ದೇಶ ಬಿಟ್ಟು ಹೊರಡಿ- ಬಿಜೆಪಿಯ ದಿಲೀಪ್ ಘೋಷ್

0
560

ಸನ್ಮಾರ್ಗ ವಾರ್ತೆ

ಕೊಲ್ಕತಾ, ಸೆ. 11: ಇಂಡಿಯ ಹೆಸರನ್ನು ಭಾರತ ಎಂದು ನಾಮಕರಣ ಮಾಡುವುದನ್ನು ಯಾರೆಲ್ಲ ವಿರೋಧಿಸುತ್ತಾರೊ ಅಂತಹವರು ಇಲ್ಲಿರುವುದು ಬೇಡ. ದೇಶ ಬಿಟ್ಟು ಹೊರಟು ಹೋಗಿ ಎಂದು ಪಶ್ಚಿಮ ಬಂಗಾಳದ ಮೇದಿನಿಪುರ ಸಂಸತ್ಸದಸ್ಯ ಪಶ್ಚಿಮ ಬಂಗಾಳದ ಮಾಜಿ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಎಂಬವರು ಹೇಳಿದ್ದಾರೆ.

ಅವರು ಪ್ರತಿಪಕ್ಷಗಳ ವಿರೋಧಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ದೇಶದ ಹೆಸರನ್ನು ಭಾರತ ಎಂಬುದಕ್ಕೆ ಸೀಮಿತಗೊಳಿಸುವ ಕೇಂದ್ರ ಸರಕಾರದ ಯತ್ನವನ್ನು ಬಲವಾಗಿ ಬೆಂಬಲಿಸಿದ್ದಾರೆ.

ಚಾಯ್ ಪೆ ಚರ್ಚೆ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದ ಘೋಷ್ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೊಲ್ಕತಾದಲ್ಲಿರುವ ವಿದೇಶಿಯರ ಮೂರ್ತಿಗಳನ್ನು ತೆರವುಗೊಳಿಸುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಬಿಜೆಪಿಯ ನಾಯಕ ರಾಹುಲ್ ಸಿನ್ಹ ಜಿ20 ಸಂದರ್ಭದಲ್ಲಿ ಇಂಡಿಯಾ ಹೋಗಿ ದೇಶವನ್ನು ಭಾರತ ಎಂದು ಹೆಸರಿಸಿರುವುದನ್ನು ಸಮರ್ಥಿಸಿಕೊಂಡಿದ್ದರು. ಅವರ ಪ್ರಕಾರ ಒಂದು ದೇಶಕ್ಕೆ ಎರಡು ಹೆಸರಿರಬಾರದು ಎಂದಾಗಿದೆ. ವಿದೇಶಿ ನಾಯಕರು ಜಿ20 ಶೃಂಗಕ್ಕೆ ಬಂದಿದ್ದಾರೆ. ಹೆಸರು ಬದಲಿಸಲು ಇದು ಸರಿಯಾದ ಸಮಯ ಎಂದು ಅವರು ಸಮರ್ಥಿಸಿಕೊಂಡಿದ್ದರು. ದಿಲೀಪ್ ಘೋಷ್ ಭಾರತ ಹೆಸರಿನ ಪರ ತೀಕ್ಷ್ಣ ಹೇಳಿಕೆಯೊಂದಿಗೆ ಮೂರ್ತಿಗಳನ್ನು ತೆರವು ಮಾಡುವ ಘೋಷಣೆಯನ್ನು ಮಾಡಿದ್ದು ಬಿಜೆಪಿಯವರ ಹೆಸರು ಬದಲಾವಣೆಯ ಪ್ರಕ್ರಿಯೆ ಕೊನೆಗೊಳ್ಳುವುದಿಲ್ಲ ಎಂಬುದನ್ನು ಸೂಚಿಸುತ್ತಿದೆ ಎಂದು ಹೇಳಲಾಗುತ್ತಿದೆ.