ಆಹಾರ ಸಿಗದೆ ಬಿಹಾರದ ಹಾಸ್ಟೆಲಿನಿಂದ ತಪ್ಪಿಸಿದ 55 ವಿದ್ಯಾರ್ಥಿನಿಯರು

0
525

ಸನ್ಮಾರ್ಗ ವಾರ್ತೆ

ಪಾಟ್ನ, ಸೆ. 12: ಬಿಹಾರದಲ್ಲಿ ಆಹಾರ ಸಿಗದೆ ಹಾಸ್ಟೆಲಿನಿಂದ 55 ರಷ್ಟು ಹೆಣ್ಣು ಮಕ್ಕಳು ತಪ್ಪಿಸಿಕೊಂಡಿದ್ದಾರೆ.

ಜಾಮುಯಿ ಜಿಲ್ಲೆಯ ಸರಕಾರಿ ರೆಸಿಡೆನ್ಶಿಯಲ್ ಶಾಲೆ ಕಸ್ತೂರ್‍ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.

ಶನಿವಾರ ರಾತ್ರೆ ಹೆಣ್ಣು ಮಕ್ಕಳು ತಪ್ಪಿಸಿಕೊಂಡಿದ್ದು ಹುಡುಕಿ 22 ಮಕ್ಕಳನ್ನು ಹಾಸ್ಟೆಲಿಗೆ ಮರಳಿ ಕರೆತರಲಾಗಿದೆ.
ಅಡುಗ ಮಾಡುವಾಗ ಸಹಾಯ ಮಾಡದಿದ್ದರೆ ಹಾಸ್ಟೆಲಿನ ಅಧಿಕಾರಿಗಳು ಊಟ ಕೊಡುವುದಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು. ಹಲವು ರಾತ್ರೆಗಳಲ್ಲಿ ಅವರು ಹಸಿವಿನಿಂದ ಮಲಗುವ ಸ್ಥಿತಿಯಿದೆ.

ಶನಿವಾರ ಸಂಜೆಯಿಂದ ಆಹಾರ ಸಿಕ್ಕಿಲ್ಲ ಎಂದು ಹಸಿದು ಹಾಸ್ಟೆಲಿನಿಂದ ಹೊರಗೆ ಹೋಗಲು ತೀರ್ಮಾನಿಸಿದ್ದೆಂದು ವಿದ್ಯಾರ್ಥಿನಿಗಳು ಹೇಳಿದರು.

ಹಾಸ್ಟೆಲ್ ವಾರ್ಡನ್ ಗುಡಿ ಕುಮಾರಿ ಹೊರಗೆ ಹೋದ ಸಮಯ ನೋಡಿ ಮಕ್ಕಳು ಹಾಸ್ಟೆಲಿನಿಂದ ಹೊರಟು ಹೋಗಿದ್ದರು. ಮಕ್ಕಳು ಹೊರಗೆ ಹೋಗಿದ್ದು  ಗಮನಿಸಲು ಸಾಧ್ಯವಾಗಿಲ್ಲ ಎಂದು ಸೆಕ್ಯುರಿಟಿ ಸಿಬ್ಬಂದಿ ತಿಳಿಸಿದರು.

ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸ್ಕೂಲ್ ಅಡ್ಮಿನಿಸ್ಟೇಟರ್ ಪ್ರಶಾಂತ್ ಕುಮಾರ್ ತಿಳಿಸಿದರು. ಅವರು ಹಾಸ್ಟೆಲಿಗೆ ಬೇಟಿ ನೀಡಿದ ನಂತರ ಕ್ರಮ ಜರಗಿಸುವ ಭರವಸೆಯನ್ನು ನೀಡಿದ್ದಾರೆ.