ಭಟ್ಕಳ: ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ “ಸಮಾನತೆಯ ಸಮಾಜದ ಶಿಲ್ಪಿ- ಪ್ರವಾದಿ ಮುಹಮ್ಮದ್(ಸ)” ಪ್ರಬಂಧ ಸ್ಪರ್ಧೆ

0
440

ಸನ್ಮಾರ್ಗ ವಾರ್ತೆ

ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮಾದಿನಾಚರಣೆಯ ಅಂಗವಾಗಿ ಸೆ.28 ರಿಂದ ಅ.6 ರ ವರೆಗೆ ಆಯೋಜಿಸಿರುವ ಸೀರತ್ ಅಭಿಯಾನ-2023 ರ ಪ್ರಯುಕ್ತ “ಸಮಾನತೆಯ ಸಮಾಜದ ಶಿಲ್ಪಿ- ಪ್ರವಾದಿ ಮುಹಮ್ಮದ್(ಸ)” ಎಂಬ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.

ಪ್ರಬಂಧವು 500 ಪದಗಳಿಗಿಂತ ಮೀರಬಾರದು. ವಿಷಯದ ಸ್ಪಷ್ಟತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇವರ ಜನ್ಮ ಕುಟುಂಬ, ಇತಿಹಾಸ ಯಾವುದನ್ನೂ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ವಿಷಯ ಮತ್ತು ಭಾಷೆಯಲ್ಲಿ ಸ್ಪಷ್ಟತೆ ಇರತಕ್ಕದ್ದು. ಕೈ ಬರಹದಲ್ಲಿ ಬರೆದ ಪ್ರಬಂಧಗಳಿಗೆ ಆಧ್ಯತೆ ನೀಡಲಾಗುವುದು. ಪ್ರಬಂಧ ಬರೆಯುವವರು ತಮ್ಮ ಇತ್ತೀಚಿನ ಭಾವಚಿತ್ರವನ್ನು ಕಳುಹಿಸತಕ್ಕದ್ದು.

ಪ್ರಬಂಧ ತಲುಪಲು ಕೊನೆಯ ದಿನಾಂಕ 25/09/23

ವಿಜೇತರಿಗೆ ಪ್ರಥಮ ಬಹುಮಾನ ರೂ.5000, ದ್ವಿತೀಯ 3000 ಮತ್ತು ತೃತೀಯ 2000 ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ರೂ.500 ರಂತೆ 5 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.

ಪ್ರಬಂಧ ಕಳುಹಿಸಬೇಕಾದ ವಿಳಾಸ: ಸಂಚಾಲಕರು, ಸೀರತ್ ಪ್ರಬಂಧ ಸ್ಪರ್ಧೆ-2023, ದಾವತ್ ಘರ್, ಸುಲ್ತಾನ್ ಸ್ಟ್ರೀಟ್, ಭಟ್ಕಳ-581320

ಹೆಚ್ಚಿನ ಮಾಹಿತಿಗಾಗಿ 9886455416 ಕರೆ ಮಾಡುವಂತೆ ಸಂಚಾಲಕ ರಝಾ ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.