ಗೋಹತ್ಯೆ ಪ್ರಕರಣಗಳಿಗೆ ಎನ್‍ಎಸ್‍ಎ ಕೇಸು ಹಾಕಿದ್ದು ತಪ್ಪು; ಇನ್ನು ಹಾಗೆ ಸಂಭವಿಸದು – ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್

0
795

ಭೋಪಾಲ,ಮಾ. 27: ಮಧ್ಯಪ್ರದೇಶದ ಕಾಂಗ್ರೆಸ್ ಸರಕಾರ ಗೋಹತ್ಯೆ ಪ್ರಕರಣಗಳನ್ನು ಎನ್‍ಎಸ್‍ಎ ( ರಾಷ್ಟ್ರೀಯ ಭದ್ರತಾ ಕಾನೂನು) ಅಡಿಯಲ್ಲಿ ದಾಖಲಿಸಿದ್ದು ತಪ್ಪು ಎಂದು ಮುಖ್ಯಮಂತ್ರಿ ಕಮಲನಾಥ್ ಹೇಳಿದ್ದಾರೆ. ಅದು ಸರಕಾರದ ನೀತಿಯಲ್ಲ. ಹಿಂದಿನ ಸರಕಾರದ ನೀತಿಯ ಮುಂದುವರಿಕೆಯಾಗಿ ಪ್ರಾದೇಶಿಕ ಮಟ್ಟದ ನಡೆದ ಒಂದ ಘಟನೆಯಾಗಿದೆ. ಇದನ್ನು ತಾನು ಬಲವಾಗಿ ವಿರೋಧಿಸಿದ್ದೇನೆ ಎಂದು ಕಮಲ್‍ನಾಥ್ ಹಿಂದೂ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಇಂತಹ ಘಟನೆಗಳಲ್ಲಿ ಎನ್‍ಎಸ್‍ಐ ಪ್ರಕರಣ ದಾಖಲಿಸಬಾರದೆಂದು ಕಟ್ಟುನಿಟ್ಟಿನ ನಿರ್ದೇಶ ನೀಡಿದ್ದೇನೆ. ಹಾಗೆಲ್ಲ ಕೇಸು ದಾಖಲಿಸುವುದು ಆ ಕಾನೂನಿನ ದುರುಪಯೋಗವೆಂದು ಭಾವಿಸುತ್ತೇನೆ. ಆದರೆ ಗೋ ರಕ್ಷಣೆ ನನ್ನ ಸರಕಾರದ ನೀತಿಯಾಗಿದೆ. ಗೋಸಂರಕ್ಷಣಾ ಕೇಂದ್ರಗಳನ್ನು ಈ ಸರಕಾರ ನಿರ್ಮಿಸಲಿದೆ. ಸಾರ್ವಜನಿಕ ಹಣ ಬಳಸಿ ಗೋಶಾಲೆಗಳನ್ನು ತೆರೆಯುವುದು ತಪ್ಪಲ್ಲ. ಬಿಜೆಪಿ ಸರಕಾರ ಗೋ ಸಂರಕ್ಷಣೆಗೆ ಏನೂ ಮಾಡಿಲ್ಲ. ಭಾರತದಲ್ಲಿ ದನಗಳಿಗೆ ದೊಡ್ಡ ಪ್ರಾಮುಖ್ಯತೆ ಇದೆ.


ನೆಹರೂ ಕುಟುಂಬದಲ್ಲಿ ಇಂದಿರಾಗಾಂಧಿ ಮೊದಲಾದವರ ಜೊತೆ ಕೆಲಸ ಮಾಡಲು ತನಗೆ ಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ಅವರವರ ಕೆಲಸದ ಶೈಲಿಯಿದ್ದವು. ರಾಹುಲ್ ಗಾಂಧಿಗೆ ದೇಶದ ವಿಭಿನ್ನವಾದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದು ಕಮಲನಾಥ್ ಹೇಳಿದರು.