ಫ್ರಾನ್ಸ್: ನಿರ್ಮಾಣ ಹಂತದಲ್ಲಿರುವ ಮಸೀದಿಯ ಬಳಿ ಹಂದಿ ತಲೆ ಪತ್ತೆ!

0
1335

ಬೊರೆಡೆಯುಕ್ಷ್,ಮಾ. 26: ನಿರ್ಮಾಣ ಹಂತದಲ್ಲಿರುವ ಫ್ರಾನ್ಸ್‌ನ ಮಸೀದಿಯೊಂದರ ಪ್ರವೇಶದ್ವಾರದ ಬಳಿ ಹಂದಿ ರುಂಡವನ್ನು ಯಾರೊ ಎಸೆದು ಹೋಗಿದ್ದಾರೆ. ಹಂದಿ ತಲೆಮಾತ್ರವಲ್ಲ ಪ್ರಾಣಿಯ ರಕ್ತದ ಕಲೆಗಳು ಕೂಡ ಮಸೀದಿಯ ಪ್ರವೇಶದ್ವಾರದಲ್ಲಿ ಬಳಿ ಕಾಣಿಸಿಕೊಂಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಕಳೆದ ದಶಕದಿಂದ ಫ್ರಾನ್ಸಿನಲ್ಲಿ ಮುಸ್ಲಿಮರ ಪ್ರಾರ್ಥನಾ ಸ್ಥಳದ ಮೇಲೆ ದಾಳಿ ನಡೆಯುವುದು ಮುಂದುವರಿಯುತ್ತಿದೆ. ಫ್ರಾನ್ಸ್‌ನ ನೈರುತ್ಯ ಭಾಗದಲ್ಲಿರುವ ಸಣ್ಣ ನಗರ ಬೆರ್‍ಗ್ರೇಸ್‍ನಲ್ಲಿ ಮಸೀದಿ ನಿರ್ಮಾಣವಾಗುತ್ತಿದ್ದು. 2017ರಲ್ಲಿ ಇಲ್ಲಿ ಮಸೀದಿಯೊಂದು ನಿರ್ಮಾಣಕ್ಕಾಗಿ ಪರವಾನಿಗೆ ಪಡೆಯಲು ಜಿಲ್ಲಾಡಳಿತಕ್ಕೆ ಅರ್ಜಿ ಹಾಕಿದಾಗ ಸ್ಥಳೀಯರು ವಿರೋಧಿಸಿದ್ದರು. 2018ರಲ್ಲಿ ಮಸೀದಿ ನಿರ್ಮಾಣಕ್ಕೆ ಪರವಾನಿಗೆ ನೀಡಲಾಗಿತ್ತು.

“ಮಸೀದಿ ಕಟ್ಟಡದ ಗೋಡೆಗಳಿಗೆ ಪ್ರಾಣಿ ರಕ್ತವನ್ನು ಎರಚಲಾಗಿದೆ ಮತ್ತು ಮಸೀದಿಯ ಮುಂಭಾಗದಲ್ಲಿ ಹಂದಿ ತಲೆಯನ್ನು ತಂದು ಹಾಕಲಾಗಿದೆ ಎಂದು ಬೆರ್‍ಗ್ರೆಸ್‍ನ ಪೊಲೀಸಧಿಕಾರಿ ಚಾಲ್ರ್ಸ್ ಕಾರ್ಲೋಸ್ ಹೇಳಿದರು. ರಾತ್ರೆಯ ವೇಳೆ ಯಾರೋ ದುಷ್ಕೃತ್ಯವೆಸಗಿದ್ದಾರೆ. ಬೆಳಗ್ಗೆ ಕೆಲಸಗಾರರು ಬಂದಾಗ ಹಂದಿ ತಲೆ ಇರುವುದನ್ನು ನೋಡಿದ್ದಾರೆ. ಮಸೀದಿ ಕಟ್ಟಡದ ನಿರ್ಮಾಣ ಸ್ಥಳೀಯರಲ್ಲಿ ವಿರೋಧವಿದೆ ಎಂದು ಕಾರ್ಲೊಯಿಸ್ ತಿಳಿಸಿದರು. ಫ್ರಾನ್ಸಿನ ಕಾನೂನು ಪ್ರಕಾರ ಧಾರ್ಮಿಕ ಸ್ಥಳದಲ್ಲಿ ಇಂತಹ ಕೃತ್ಯವೆಸಗುವುದು ಏಳು ವರ್ಷಗಳವರೆಗೆ ಶಿಕ್ಷೆಯಾಗುವ ಅಪರಾಧವಾಗಿದೆ.