ಬೆಂಗಳೂರು, ಮಾ. 29: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುದ್ದ ಹನುಮಗೌಡ ನಾಮಪತ್ರ ಹಿಂಪಡೆಯಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುದ್ದೆ ಹನುಮೆಗೌಡರಿಗೆ ಅನ್ಯಾಯವಾಗಿದ್ದು ನಿಜ ಎಂದು ಒಪ್ಪಿಕೊಂಡಿರುವ ಸಿದ್ದರಾಮಯ್ಯ ಇದನ್ನು ಸರಿಪಡಿಸುತ್ತೇವೆ ಎಂದು ಮಾಧ್ಯಮಗಳ ಮುಂದೆ ಹೇಳಿದರು. ಮುದ್ದೆ ಹನುಮೆಗೌಡರು ನಾಮಪತ್ರ ವಾಪಸು ಪಡೆಯುವ ಕುರಿತು ತನ್ನೊಡನೆ ಒಪ್ಪಿಕೊಂಡಿದ್ದಾರೆ ಎಂದು ಈಸಂದರ್ಭದಲ್ಲಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಏನಿದ್ದರೂ ಮುದ್ದ ಹನುಮೇಗೌಡರ ಅಧಿಕೃತವಾಗಿ ಏನೂ ಹೇಳಿಲ್ಲ. ಅವರೀಗ ಬೆಂಗಳೂರಿನಿಂದ ತುಮಕೂರಿಗೆ ತೆರಳಿದ್ದು ಕಾರ್ಯಕರ್ತರೊಂದಿಗೆ ಚರ್ಚಿಸಿ ಮಧ್ಯಾಹ್ನದ ವೇಳೆ ತನ್ನ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ದೇವೆಗೌಡರು ತುಮಕೂರಿನಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದು ಮುದ್ದ ಹನುಮೇಗೌಡರು ನಾಮಪತ್ರ ಹಿಂಪಡೆದರೆ ದೇವೆಗೌಡರ ಗೆಲುವಿಗಿದ್ದ ಬಹುದೊಡ್ಡ ತೊಡಕು ನಿವಾರಣೆಯಾಗಲಿದೆ. ಆದರೆ ದೇವೇಗೌಡರ ಪರ ಪ್ರಚಾರದಲ್ಲಿ ಅವರು ಸಕ್ರಿಯವಾಗುವುದು ಅನುಮಾನ ಎಂದು ಈಗಾಗಲೇ ಮುದ್ದಹನುಮೇಗೌಡರ ನಿಕಟ ಮೂಲಗಳು ತಿಳಿಸಿವೆ. ಮುದ್ದ ಹನುಮಗೌಡರೊಂದಿಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಮುದ್ದ ಹನುಮೇ ಗೌಡರೊಂದಿಗೆ ಚರ್ಚಿಸಿದ್ದು ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನಮಾನ ನೀಡುವ ಭರವಸೆ ನೀಡಿದ ಬಳಿಕ ನಾಮಪತ್ರ ವಾಪಸು ಪಡೆಯಲು ಮುಂದಾದರೆ ಎಂದು ವರದಿಯಾಗಿದೆ.












