ತಿರುವನಂತಪುರಂ,ಮಾ.29: ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸದಂತೆ ತಡೆಯುವ ಯತ್ನ ದಿಲ್ಲಿಯಲ್ಲಿ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದ್ದಾರೆ. ವಯನಾಡಿನ ಅಭ್ಯರ್ಥಿಯ ಘೋಷಣೆ ತಡವಾಗದು. ರಾಹುಲ್ ಸ್ಪರ್ಧಿಸದಂತೆ ಮಾಡಲು ಸಿಪಿಎಂ ದಿಲ್ಲಿಯಲ್ಲಿ ಅಡ್ಡಿ ಪಡಿಸುತ್ತಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ ಎಂದು ಮುಲ್ಲಪ್ಪಳ್ಳಿ ಹೇಳಿದರು.
ಇದೇವೇಳೆ ವಯನಾಡಿನ ಅಭ್ಯರ್ಥಿ ಘೋಷಣೆ ತಡವಾಗುವುದರಿಂದ ಕಾರ್ಯಕರ್ತರಿಗೆ ತೊಂದರೆ ಆಗುತ್ತಿದೆ ಎಂದು ಕೆ. ಮುರಳೀಧರನ್ ಹೇಳಿದರು. ರಾಹುಲ್ ಗಾಂಧಿ ಅಭ್ಯರ್ಥಿಯಾಗದಿದ್ದರೆ ಅದು ಕಾರ್ಯಕರ್ತರಲ್ಲಿನಿರಾಶೆಗೆ ಕಾರಣವಾಗಬಹುದು. ವಡಗರದ ಪ್ರಚಾರಕ್ಕೆ ಇದು ಅಡ್ಡಿಯಾಗಿಲ್ಲ ಎಂದು ಅವರು ತಿಳಿಸಿದರು. ರಾಹುಲ್ ಗಾಂಧಿ ಸ್ಪರ್ಧಿಸದಂತೆ ಮಾಡಲು ಎಡ ಪಕ್ಷಗಳು ಒತ್ತಡ ಹೇರುತ್ತಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.












