ಸನ್ಮಾರ್ಗ ವಾರ್ತೆ
ನವದೆಹಲಿ: ಸುದ್ದಿ ಪೋರ್ಟಲ್ ನ್ಯೂಸ್ ಕ್ಲಿಕ್ ವಿರುದ್ಧ ಎಫ್ಐಆರ್ ಹೊರಬಿದ್ದಿದೆ.
ನ್ಯೂಸ್ ಕ್ಲಿಕ್ ಐದು ವರ್ಷಗಳ ಕಾಲ ಅಕ್ರಮವಾಗಿ ಹಣ ಪಡೆದಿದೆ ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ವಿದೇಶಿ ನಿಧಿಯನ್ನು ಸ್ವೀಕರಿಸುವ ಮೂಲಕ ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವ ಸಂಚು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ನ್ಯೂಸ್ ಕ್ಲಿಕ್ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರು 2019 ರ ಲೋಕಸಭೆ ಚುನಾವಣೆಯನ್ನು ಹಾಳು ಮಾಡಲು ಉದ್ದೇಶಪೂರ್ವಕ ಪ್ರಯತ್ನ ನಡೆಸಿದ್ದಾರೆ ಎಂದು ಎಫ್ಐಆರ್ ಹೇಳುತ್ತದೆ.
2018ರಿಂದ ಕೋಟ್ಯಂತರ ಅಕ್ರಮ ಹಣ ಬಂದಿದೆ ಎನ್ನಲಾಗಿದೆ. ರೈತರ ಮುಷ್ಕರಕ್ಕೆ ಸಂಬಂಧಿಸಿದಂತೆ ಸರ್ಕಾರದ ಟೀಕೆಯನ್ನೂ ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಕಾಶ್ಮೀರ ಮತ್ತು ಅರುಣಾಚಲ ಪ್ರದೇಶಗಳು ವಿವಾದಿತ ಪ್ರದೇಶಗಳು ಎಂಬ ಸುದ್ದಿ ಹಬ್ಬಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಸುಳ್ಳು ಮಾಹಿತಿ ಹರಡಲಾಗಿದೆ ಎಂಬ ಅಂಶವೂ ಇದೆ.
ಈ ಎಲ್ಲಾ ಆರೋಪಗಳನ್ನು ನ್ಯೂಸ್ ಕ್ಲಿಕ್ ನಿರಾಕರಿಸಿದೆ. ಎಫ್.ಐ.ಆರ್ ಈ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಪ್ರಬೀರ್ ಪುರ್ಕಾಯಸ್ಥ ಸಲ್ಲಿಸಿರುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಅಕ್ರಮವಾಗಿ ವಿದೇಶಿ ಹಣವನ್ನು ಪಡೆದ ಪ್ರಕರಣದಲ್ಲಿ ಪ್ರಬೀರ್ ಮತ್ತು ನ್ಯೂಸ್ಕ್ಲಿಕ್ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಗಿದೆ. ಅವರು ಚೀನಾದಿಂದ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ನ್ಯೂಯಾರ್ಕ್ ಟೈಮ್ಸ್ ವರದಿ ಆಧರಿಸಿ ಈ ಬಂಧನ ನಡೆದಿದೆ. ಬಂಧನಕ್ಕೂ ಮುನ್ನ ದಾಳಿ ಕೂಡ ನಡೆಸಲಾಗಿತ್ತು. ನ್ಯೂಸ್ಕ್ಲಿಕ್ ಚೀನಾಕ್ಕೆ ಸಂಬಂಧಿಸಿದ ಮೂಲಗಳಿಂದ 38 ಲಕ್ಷ ರೂಪಾಯಿಗಳನ್ನು ಪಡೆದಿದೆ ಎಂದು ಇಡಿ ಆರೋಪಿಸಿದೆ. ಈಗ ಚೀನಾದ ಶಾಂಘೈನಲ್ಲಿರುವ ನೆವಿಲ್ಲೆ ರಾಯ್ ಸಿಂಘಮ್ ಅವರನ್ನು ವರದಿಯಲ್ಲಿ ಹೆಸರಿಸಲಾಗಿದೆ.












