ಸನ್ಮಾರ್ಗ ವಾರ್ತೆ
ಲಕ್ನೊ: ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ 4 ವರ್ಷ ಮತ್ತು 7 ವರ್ಷದ ಬಾಲಕಿಯರ ಕೊರಳು ಕತ್ತರಿಸಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಬಲ್ರಾಯ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಹಾದೂರಪುರ ಗ್ರಾಮದಲ್ಲಿ ರವಿವಾರ ಈ ಕ್ರೂರ ಘಟನೆ ನಡೆಯಿತು. ಬಾಲಕಿಯರ ಕುಟುಂಬಕ್ಕೆ ಹತ್ತಿರದ ಸಂಪರ್ಕ ಇಟ್ಟುಕೊಂಡವರು ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಹೇಳುತ್ತಿದ್ದಾರೆ.
ಜಯ್ವೀರ್ ಸಿಂಗ್ ಎಂಬವರ ಮಕ್ಕಳನ್ನು ಕೊಲೆ ಮಾಡಿಲಾಗಿದೆ. ಇವರು ಮತ್ತು ಪತ್ನಿ ಮತ್ತು ಇತರ ಮಕ್ಕಳು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮನುಷ್ಯತ್ವವನ್ನು ನಾಚಿಸುವ ಈ ಘಟನೆ ಅಕ್ಷಮ್ಯವಾದದ್ದೆಂದು ಜನರು ಹೇಳುತ್ತಿದ್ದಾರೆ.
ಈ ಕ್ರೂರ ಕೃತ್ಯ ಮಾಡಿದವರು ಯಾರು ಎಂದು ಈ ವರೆಗೂ ಪೊಲೀಸರಿಂದ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದರೆ ತನಿಖೆ ವೇಗದಲ್ಲಿ ಮುಂದುವರಿದಿದೆ. ಶೀಘ್ರದಲ್ಲಿ ಆರೋಪಿಗಳನ್ನು ಸೆರೆ ಹಿಡಿಯುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಬಾಲಕಿಯರ ಮೃತದೇಹಗಳನ್ನು ಪೋಸ್ಟ್ ಮಾರ್ಟಂ ನಡೆಸಲು ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.












