ಕೇರಳ ರಾಜ್ಯ ಮಟ್ಟದ ಕ್ವಿಝ್ ಸ್ಪರ್ಧೆಯಲ್ಲಿ ಕಾಸರಗೋಡು ಆಲಿಯಾ ಕಾಲೇಜಿಗೆ ತೃತೀಯ ಬಹುಮಾನ

0
548

ಸನ್ಮಾರ್ಗ ವಾರ್ತೆ

ಕಲ್ಲಿಕೋಟೆ: ಪ್ರವಾದಿ ಮುಹಮ್ಮದ್ (ಸ)ರ ಜೀವನದ ಕುರಿತು ನಡೆದ ರಾಜ್ಯ ಮಟ್ಟದ ಕ್ವಿಝ್ ಸ್ಪರ್ಧೆಯಲ್ಲಿ ಮುಹಮ್ಮದ್ ಸಫ್ವಾನ್ ಬೋಳಂಗಡಿ ಹಾಗೂ ಅಬ್ದುಲ್ ಬಾಸಿತ್ ಮಡಿಕೇರಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ಆಲಿಯಾ ಅರೆಬಿಕ್ ಕಾಲೇಜು ಕಾಸರಗೋಡು ವಿಧ್ಯಾರ್ಥಿಗಳಾಗಿದ್ದು ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದರು.

ಇಂಟಿಗ್ರೇಟೆಡ್ ಎಜ್ಯುಕೇಶನ್ ಕೌನ್ಸಿಲ್ ಆಫ್ ಇಂಡಿಯಾ ಹೈಯರ್ ಎಜುಕೇಶನ್ ಬೋರ್ಡ್ ಈ ಅಂತರ್ಕಾಲೇಜು ರಾಜ್ಯ ಮಟ್ಟದ ಸ್ಪರ್ದೆ ಆಯೋಜಿಸಿತ್ತು. ಕೇರಳ ರಾಜ್ಯದ ಹತ್ತೊಂಬತ್ತು ಕಾಲೇಜು ತಂಡಗಳು ಭಾಗವಹಿಸಿತ್ತು. ಪ್ರಥಮ ಸ್ಥಾನವನ್ನು ಅಲ್ ಫಲಾಹ್ ಮಾಹೆ ಪಡೆದರೆ ದ್ವಿತೀಯ ಸ್ಥಾನಿಯಾಗಿ ಇಸ್ಲಾಹಿಯಾ ಕಾಲೇಜು ಕ್ಯಾಲಿಕಟ್ ಪಡೆದಿತ್ತು.