ಬಿಜೆಪಿ ತೊರೆದ ನಟಿ ಗೌತಮಿ

0
3107

ಸನ್ಮಾರ್ಗ ವಾರ್ತೆ

ಚೆನ್ನೈ, ಅ.23: ನಟಿ ಗೌತಮಿಯವರು ಬಿಜೆಪಿಯೊಂದಿಗಿನ ತನ್ನ 25 ವರ್ಷಗಳ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಅವರು 25 ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ತನ್ನ ವೈಯಕ್ತಿಕ ಕಷ್ಟದ ವೇಳೆ ಬಿಜೆಪಿ ಬೆಂಬಲ ನೀಡಿಲ್ಲ ಎಂದು ಸೋಮವಾರ ಬಿಜೆಪಿಗೆ ಅವರು ರಾಜೀನಾಮೆ ಘೋಷಿಸಿದರು.

ವೈಯಕ್ತಿಕ ಕಷ್ಟದಲ್ಲಿ ತನ್ನ ಆಸ್ತಿ ಕಿತ್ತುಕೊಂಡ ವ್ಯಕ್ತಿಗೆ ಬಿಜೆಪಿಯವರು ಬೆಂಬಲ ಸೂಚಿಸಿದರು ನನಗೆ ನಂಬಿಕೆ ವಂಚನೆ ಎಸಗಿದ್ದಾರೆ ಎಂದು ತನ್ನ ರಾಜೀನಾಮೆಯ ಕಾರಣವನ್ನು ಗೌತಮಿ ಬಹಿರಂಗಪಡಿಸಿದ್ದಾರೆ.

ಗೌತಮಿ ಅಲಗಪ್ಪನ್ ಎಂಬ ವ್ಯಕ್ತಿಯ ವಿರುದ್ಧ ಆರೋಪ ಹೊರಿಸಿದ್ದು ತನ್ನ 46 ಎಕರೆ ಜಮೀನು ಮಾರಲು ಗೌತಮಿ ನಿರ್ಧರಿಸಿದ್ದರು. ಅದನ್ನು ಮಾರವುದಕ್ಕೆ ಸಹಾಯ ಮಾಡುವುದಾಗಿ ಅಲಗಪ್ಪನ್ ಮತ್ತು ಅವರ ಪತ್ನಿ ಹೇಳಿದ್ದರು. ಅವರನ್ನು ನಂಬಿ ಪವರ್ ಆಫ್ ಅಟಾರ್ನಿ ಕೊಟ್ಟಿದ್ದೆ. ಆದರೆ ಅಲಗಪ್ಪನ್ ಕುಟುಂಬ ತನ್ನ ಸಹಿ ಉಪಯೋಗಿಸಿ ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂಪಾಯಿಯ ಆಸ್ತಿ ಕಿತ್ತುಕೊಂಡಿದ್ದಾರೆ. ಇದೇ ವೇಳೆ ಅಲಗಪ್ಪನ್ ತನ್ನನ್ನು ಮತ್ತು ತನ್ನ ಪುತ್ರಿಯನ್ನು ಕೊಲೆ ಮಾಡುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಗೌತಮಿ ತಿಳಿಸಿದ್ದಾರೆ.