ಹಾರೂನ್ ರಶೀದ್‌ರ ಉಡುಗೊರೆ ನಿರಾಕರಿಸಿದ್ದೇಕೆ ಆ ವೃದ್ಧ?

0
371

✍️ಶೈಕ್ ಮುಹಮ್ಮದ್ ಕೆ.

ಸನ್ಮಾರ್ಗ ವಾರ್ತೆ

ಓರ್ವ ವೃದ್ಧರು ನೆಲದಲ್ಲಿ ಚೆಲ್ಲಿರುವ ಧಾನ್ಯಗಳನ್ನು ಹೆಕ್ಕುತ್ತಾ ಸಾಗುತ್ತಿದ್ದರು. ಆಗ ಚಕ್ರವರ್ತಿ ಹಾರೂನ್ ರಶೀದ್‌ರ ಸೇವಕನೋರ್ವನು ಆ ದಾರಿಯಾಗಿ ಬಂದನು. ಆತನ ಕೈಯಲ್ಲಿ ಆಸ್ಥಾನ ಗಾಯಕಿಯ ಒಂದು ನಿಷಿದ್ಧ ವಸ್ತುವಿತ್ತು. ವೃದ್ಧನು ಅದನ್ನು ಆತನಿಂದ ಕಿತ್ತುಕೊಂಡು ಹಾಳುಗೆಡಹಿದನು. ಈ ಸುದ್ಧಿ ಚಕ್ರವರ್ತಿಗೆ ಮುಟ್ಟಿತು. ಅವರು ಕೋಪದಿಂದ ಕೆಂಡವಾದರು. ತಕ್ಷಣವೇ ವೃದ್ಧನನ್ನು ತನ್ನ  ಮುಂದೆ ಹಾಜರು ಪಡಿಸುವಂತೆ ಆಜ್ಞಾಪಿಸಿದರು.

“ನಿಮ್ಮನ್ನು ಚಕ್ರವರ್ತಿ ಕರೆಯುತ್ತಿದ್ದಾರೆ” ಸೇವಕನು ವೃದ್ಧನ ಬಳಿ ಬಂದು ತಿಳಿಸಿದ.

“ಹಾಗಾದರೆ ಬರುತ್ತೇನೆ” ವೃದ್ಧ ನಿರ್ಲಿಪ್ತ ಭಾವದಿಂದ ಹೇಳಿದ.

“ಈ ವಾಹನ ಹತ್ತಿರಿ” ಸೇವಕ ಹೇಳಿದ.

ವೃದ್ಧ ಅದಕ್ಕೆ ಒಪ್ಪಲಿಲ್ಲ. ಆತ, ಕಾಲ್ನಡಿಗೆಯಲ್ಲಿಯೇ ಹೋಗಿ ಅರಮನೆಯ ಬಾಗಿಲಲ್ಲಿ ನಿಂತನು. ಆತನ ಬಳಿ ಧಾನ್ಯದ ಚೀಲವಿತ್ತು.  ಅರಮನೆಯ ಕಾವಲುಗಾರನು ಆ ಚೀಲವನ್ನು ತನ್ನ ಬಳಿ ತೊರೆದು ಹೋಗುವಂತೆ ತಿಳಿಸಿದ. ಆದರೆ ವೃದ್ಧ ಅದಕ್ಕೆ ಒಪ್ಪಲಿಲ್ಲ. ಆತ ಹೀಗೆ ಹೇಳಿದ, “ಅದು ತನ್ನ ರಾತ್ರಿಯ ಆಹಾರವಾಗಿದೆ.

“ರಾತ್ರಿಯ ಆಹಾರವನ್ನು ನಾನು ಕೊಡುತ್ತೇನೆ.”

“ಬೇಡ ನಿಮ್ಮ ಆಹಾರ ನನಗೆ ಬೇಡ.” ವೃದ್ಧನು ಸಹಾಯ ವಾಗ್ದಾನವನ್ನು ತಿರಸ್ಕರಿಸಿದ. ಆತ ಹಾರೂನ್ ರಶೀದ್‌ರ ಬಳಿ ಹೋಗಿ ಅವರನ್ನು ಅಭಿನಂದಿಸಿದ. ಕುಪಿತರಾಗಿದ್ದ ಹಾರೂನ್ ರಶೀದ್ ವೃದ್ಧರ ಕೃತ್ಯದ ಬಗ್ಗೆ ಪ್ರಶ್ನಿಸಿದರು.

ಸಮಚಿತ್ತ ಭಾವದಿಂದ ವೃದ್ಧ ಹೀಗೆ ಹೇಳಿದರು: ನಿಮ್ಮ ತಂದೆ ತಾತಂದಿರು ಮಸೀದಿಯ ಭಾಷಣ ವೇದಿಕೆಯಲ್ಲಿ ಪವಿತ್ರ ಕುರ್‌ಆನ್‌ನ ಒಂದು ವಾಕ್ಯವನ್ನು ಉಚ್ಛರಿಸುವುದನ್ನು ನಾನು ಕೇಳಿದ್ದೇನೆ. “ನ್ಯಾಯ ನೀತಿ ಪಾಲಿಸುವಂತೆ ಮತ್ತು ಕುಟುಂಬ ಸಂಬಂಧ ಬೆಳೆಸುವಂತೆ ಅಲ್ಲಾಹನು ಆಜ್ಞಾಪಿಸಿರುತ್ತಾನೆ. ಅಶ್ಲೀಲತೆ, ಅನ್ಯಾಯ, ಅಕ್ರಮಗಳನ್ನು ನಿಷೇಧಿಸಿದ್ದಾನೆ ಎಂದು ನಾನು ನಿಷಿದ್ಧವಾದ ಒಂದು ವಿಷಯವನ್ನು ನೋಡಿದೆ. ಅದನ್ನು ವಿರೋಧಿಸಿದೆ ಅಷ್ಟೇ.”

ಇದನ್ನು ಕೇಳಿ ಚಕ್ರವರ್ತಿ ನಿರುತ್ತರರಾದರು. ಅವರಿಗೆ ಬೇರೇನೂ ಹೇಳಲಿಕ್ಕಿರಲಿಲ್ಲ. ಆದ್ದರಿಂದ ವೃದ್ಧರನ್ನು ಮರಳಿ ಕಳಿಸಿದರು. ಚಕ್ರವರ್ತಿಯು ತನ್ನ ಸೇವಕನನ್ನು ಅವರ ಹಿಂದೆ ಕಳುಹಿಸಿ ಹತ್ತು ಸಾವಿರ ನಾಣ್ಯಗಳ ಒಂದು ಚೀಲವನ್ನು ಆತನಿಗೆ ನೀಡಿದರು. ವೃದ್ಧನು ನಡೆದ ಘಟನೆಯನ್ನು ಯಾರಲ್ಲಾದರೂ ಹೇಳಿಕೊಂಡರೆ ಹಣವನ್ನು ಅವರಿಗೆ ನೀಡಬಾರದೆಂದೂ ಆದೇಶಿಸಿದರು. ಇಲ್ಲದಿದ್ದರೆ ಅದನ್ನು  ಅವರಿಗೆ ನೀಡುವಂತೆ ಸೂಚಿಸಿದರು.