ಯೋಗ ಮಾಡಿ ಅತಿತ್ತ ನಡೆದು ಸುರಂಗದೊಳಗೆ ಸಮಯ ಕಳೆಯುತ್ತಿರುವ ಕಾರ್ಮಿಕರು

0
1946

ಸನ್ಮಾರ್ಗ ವಾರ್ತೆ

ಡೆಹ್ರಾಡೂನ್, ನ.21: ಒಂದು ವಾರದಿಂದ. ಉತ್ತರಕಾಶಿಯ ಸುರಂಗದೊಳಗೆ ಸಿಕ್ಕಿಹಾಕಿಕೊಂಡಿರುವ 41 ಕಾರ್ಮಿಕರನ್ನು ಈ ವರೆಗೆ ರಕ್ಷಿಸಲು ಸಾಧ್ಯವಾಗಿಲ್ಲ. ರಕ್ಷಣಾ ಕಾರ್ಯ ಮುಂದುವರಿದಿದ್ದು ಅವರನ್ನು ಹೊರತರಲು ಇನ್ನೂ ಕೆಲವು ದಿನಗಳು ಬೇಕಾಗಬಹುದೆಂದು ಹೇಳಲಾಗುತ್ತಿದೆ.

ಇಷ್ಟು ದಿವಸ ಸುರಂಗದೊಳಗೆ ಕಾರ್ಮಿಕರು ಆರಾಮವಾಗಿಯೇ ಇದ್ದಾರೆ. ಮನೊದಾಢ್ರ್ಯತೆಗೆ ಯೋಗ ಮಾಡುತ್ತಾ ಸುರಂಗದೊಳಗೆ ಅತ್ತಿತ್ತ ನಡೆದಾಡುತ್ತಾ, ವಾಕಿ ಟಾಕಿಯ ಮೂಲಕ ತಮ್ಮ ಮನೆ ಮಂದಿ ಜೊತೆ ಮಾತಾಡುತ್ತಾ ದಿನ ದೂಡುತ್ತಿದ್ದಾರೆ.

ಸುರಂಗದೊಳಗಿರುವವರ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಲು ಒಬ್ಬ ಸೈಕೊಟ್ರಿಸ್ಟ್ ಅನ್ನು ಸರಕಾರ ನೇಮಕಗೊಳಿಸಿದೆ. ಡಾ. ಅಭಿಶೇಕ್ ಶರ್ಮ ಅವರು ಕಾರ್ಮಿಕರ ಜೊತೆ ನಿರಂತರ ಮಾತಾಡುತ್ತಿದ್ದಾರೆ. ಯೋಗ ಮುಂತಾದ ಚಟುವಟಿಕೆಗಳಿಗೆ ಸೂಚಿಸುತ್ತಿದ್ದಾರೆ. ಅವರು ಪರಸ್ಪರ ಮಾತಾಡಿಕೊಂಡಿರುವಂತೆ ಸಲಹೆ ನೀಡುತ್ತಿದ್ದಾರೆ. ಪಫ್ಡ್ ರೈಸ್, ಕಡ್ಲೆ, ಡ್ರೈಪ್ರುಟ್ಸ್ ಕಾರ್ಮಿಕರಿಗೆ ಕೊಡಲಾಗುತ್ತಿದೆ.

ಸೋಮವಾರ ಸುರಂಗದಲ್ಲಿ ಆರು ಇಂಚಿನ ಪೈಪ್ ಅಳವಡಿಸಲಾಗಿದ್ದು, ಅದರಲ್ಲಿ ಆಹಾರ ಸಾಮಾಗ್ರಿಗಳನ್ನು ತಲುಪಿಸಲಾಗುತ್ತಿದೆ. ಬಾಳೆ ಹಣ್ಣು, ಸೇಬಿನ ತುಂಡುಗಳು, ದಾಲಿಯ, ಖಿಚಡಿ ಹಾಗೂ ಇತರ ವಸ್ತುಗಳನ್ನು ಅವರಿಗೆ ನೀಡಲಾಗುತ್ತಿದೆ. ಹೆಚ್ಚು ಸಮಯ ವಿಳಂಬಿಸದೆ ಇವರಿಗೆ ಮೊಬೈಲ್ ಫೋನ್ ಚಾರ್ಜರ್ ಕೊಡಲಾಗುವುದು. ಇದಕ್ಕೆ ಸರಕಾರ ಸಿದ್ಧತೆ ನಡೆಸುತ್ತಿದೆ. ಪೈಪ್ ಮೂಲಕ ವಿಶುವಲ್ ಕನೆಕ್ಷನ್ ಸ್ಥಾಪಿಸಲು ಸರಕಾರ ಬಯಸಿದೆ. ಅದಕ್ಕಾಗಿ ಪೈಪಿನಲ್ಲಿ ಎಂಡೊಸ್ಕೋಪಿಯಲ್ಲಿ ಬಳಸುವ ಕ್ಯಾಮರಗಳನ್ನು ಅಳವಡಿಸುವ ಪ್ರಯತ್ನವೂ ನಡೆಯುತ್ತಿದೆ.

ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಆಹಾರ ತಲುಪಿಸುವುದಕ್ಕೆ ಆರು ಇಂಚಿನ ಪೈಪ್ ಅಳವಡಿಸಿದ್ದು, ಇದು 53 ಮೀಟರ್ ಉದ್ದ ಇದೆ. ಕೆಲವು ಆಹಾರಗಳು ಜೀರ್ಣವಾಗುವುದಿಲ್ಲ, ತಲೆ ಸುತ್ತು ಬರುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅದಕ್ಕೆ ಅಗತ್ಯ ಪರಿಹಾರಗಳನ್ನು ಒದಗಿಸಲಾಗಿದೆ. ಸ್ವಚ್ಛತಾ ಕಾರ್ಯಗಳಿಗಾಗಿ ಅವರು ಸುರಂಗದೊಳಗೆ ವಿಶೇಷ ಸ್ಥಳವನ್ನು ಸಿದ್ಧಪಡಿಸಿದ್ದಾರೆ. ಸವಾಲಿನ ಪರಿಸ್ಥಿತಿಗಳ ಹೊರತಾಗಿಯೂ, ಸುರಂಗದೊಳಗಿನ ನೈಸರ್ಗಿಕ ನೀರಿನ ಮೂಲವು ಕಾರ್ಮಿಕರಿಗೆ ವರವಾಗಿದೆ ಎಂದು ಡಾ ಶರ್ಮಾ ಹೇಳಿದರು. ಈ ನೀರನ್ನು ಕುಡಿಯಲು ಮತ್ತು ಇತರ ಉದ್ದೇಶಗಳಿಗೆ ಬಳಸುತ್ತಾರೆ. ನೀರು ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಕ್ಲೋರಿನ್ ಮಾತ್ರೆಗಳನ್ನು ಸಹ ನೀಡಲಾಗಿದೆ. 

ಅಧಿಕಾರಿಗಳು ಪ್ರತಿ ಅರ್ಧಗಂಟೆಗೊಮ್ಮೆ ಊಟ ನೀಡುತ್ತಿದ್ದಾರೆ. ಎರಡು-ಮೂರು ಗಂಟೆಗಳ ನಡುವೆ ಸಂವಹನವನ್ನು ಸಹ ಮಾಡಲಾಗುತ್ತದೆ. ವಿವಿಧ ರಾಜ್ಯಗಳ ಅಧಿಕಾರಿಗಳು, ಸಂಬಂಧಿಕರು ಮತ್ತು ವೈದ್ಯಕೀಯ ವೃತ್ತಿಪರರು ಸಹ ಅವರೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದಾರೆ. ಸುತ್ತುವರಿದ ಸ್ಥಳದಿಂದಾಗಿ, ಶೀತ ಅಥವಾ ಸೊಳ್ಳೆಗಳ ಉಪದ್ರವದ ಸಮಸ್ಯೆಗಳಿಲ್ಲ. ನವೆಂಬರ್ 12 ರಂದು ಸಂಭವಿಸಿದ ಅಪಘಾತದಲ್ಲಿ 41 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು.