ರಾಜಸ್ತಾನದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ -ಸಚಿನ್ ಪೈಲಟ್

0
484

ಸನ್ಮಾರ್ಗ ವಾರ್ತೆ

ಜೈಪುರ: ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ರಾಜಸ್ತಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದ್ದಾರೆ.

ಸರಕಾರಗಳನ್ನು ಬದಲಿಸುವುದು ರಾಜಸ್ತಾನಿಗಳ ಸಂಪ್ರದಾಯ, ಆದರೆ ಈ ಸಲ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿದ್ದು, ನಾವೇ ಬಹುಮತಕ್ಕೆ ಬರುತ್ತೇವೆ ಎಂದು ಸಚಿನ್ ಪೈಲಟ್ ಹೇಳಿದರು.

ಎನ್‍ಐಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತನ್ನು ಹೇಳಿದರು. ಆದರೆ ಅಧಿಕಾರಕ್ಕೆ ಸಚಿನ್ ಪೈಲಟ್ ಮತ್ತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವೆ ಪೈಪೋಟಿ ಇದೆ. ಆದರೆ ಪಾರ್ಟಿಗಾಗಿ ನಾವು ಒಟ್ಟಿಗೆ ನಿಲುತ್ತೇವೆ. ಪಾರ್ಟಿ ಒಂದಿಬ್ಬರದ್ದಲ್ಲ. ಕಾಂಗ್ರೆಸ್ ಇಲ್ಲಿ ಒಗ್ಗಟ್ಟಿನಲ್ಲಿದೆ. ಈಗ ಚುನಾವಣೆ ನಡೆಯುತ್ತಿರುವ 199 ಸ್ಥಾನಗಳಲ್ಲಿ ಬಹುಮತ ಸಾಧಿಸುತ್ತೇವೆ ಎಂದು ಸಚಿನ್ ಪೈಲಟ್ ಹೇಳಿದರು.

2018ರ ಚುನಾವಣೆಯಲ್ಲಿ ಕಾಂಗ್ರೆಸ್ 99 ಸೀಟುಗಳನ್ನು ಗೆದ್ದಿತ್ತು. ಬಿಜೆಪಿಗೆ 73 ಸೀಟು ಗಳಿಸಿತ್ತು. ಬಿಎಸ್‍ಪಿ ಮತ್ತು ಪಕ್ಷೇತರರ ಬೆಂಬಲದಲ್ಲಿ ಕಾಂಗ್ರೆಸ್ ಅಲ್ಲಿ ಸರಕಾರ ರಚಿಸಿತ್ತು.