ದಮ್ಮಾಂ: ಜನ ವಾಸವಿಲ್ಲದ ಫ್ಲಾಟ್‍ನಿಂದ ದಾನ ಸಿಕ್ಕಿದ ಟೇಬಲ್ ಸ್ವೀಕರಿಸಿದ ಇಬ್ಬರು ಭಾರತೀಯರು ಕಳ್ಳತನ ಆರೋಪದಲ್ಲಿ ಜೈಲುಪಾಲು

0
1433

ದಮ್ಮಾಂ,ಎ.3: ಯಾರೂ ವಾಸವಿಲ್ಲದ ಫ್ಲಾಟಿನ ಕಾವಲುಗಾರ ಬಾಂಗ್ಲಾದೇಶಿ ಪ್ರಜೆ ನೀಡಿದ ಟೇಬಲನ್ನು ಕೊಂಡು ಹೋದ ಭಾರತೀಯ ಮೂಲದ ಇಬ್ಬರು ಸೌದಿ ಅರೇಬಿಯದಲ್ಲಿ ಜೈಲು ಪಾಲಾಗಿದ್ದಾರೆ. ಅವರ ವಿರುದ್ಧ ಕಳವು ಆರೋಪ ಹೊರಿಸಲಾಗಿದೆ. ಅಲ್‍ಕೋಬರ್‍ನ ಫ್ಲಾಟೊಂದರಿಂದ ವಿದ್ಯುತ್ ಇಲ್ಲದ್ದರಿಂದ ಟೇಬಲ್‍ನ್ನು ಕೆಳಗೆ ತರಲಾಗಿತ್ತು. ಅದನ್ನು ಶುಚಿಗೊಳಿಸುವಾಗ ಅಲ್ಲಿಗೆ ಬಂದ ಹತ್ತಿರದ ಫ್ಲಾಟಿನಲ್ಲಿ ವಾಸವಿದ್ದ ಸ್ವದೇಶಿ ವ್ಯಕ್ತಿ ಕಟ್ಟಡದ ಮಾಲಕನನ್ನು ಕರೆಯಿಸಿಕೊಂಡಿದ್ದ.

ಕಟ್ಟಡದ ಮಾಲಕ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾನೆ. ವಾಚ್‍ಮೆನ್ ನಮಗೆ ಕೊಟ್ಟದ್ದೆಂದು ಹೇಳಿದರೂ ಕಟ್ಟಡ ಮಾಲಕ ಸಮ್ಮತಿಸಲಿಲ್ಲ. ಇನ್ನು ಇಬ್ಬರು ತಮ್ಮ ನಿರಪರಾಧಿತ್ವವನ್ನು ಕೋರ್ಟಿನಲ್ಲಿಯೇ ಸಾಬೀತು ಪಡಿಸಬೇಕಾಗುತ್ತದೆ. ಭಾರತ ಮೂಲದವರ ಗೆಳೆಯರು ರಾಜಿಗೆ ಯತ್ನಿಸಿದರೂ ವಿಫಲವಾಯಿತು. ವಿದೇಶದಲ್ಲಿ ದುಡಿಯುವಾಗ ಇಂತಹ ತೊಂದರೆಗಳಲ್ಲಿ ಸಿಲುಕದಂತೆ ಎಚ್ಚರ ವಹಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ಹೇಳಿದರು.