ಸನ್ಮಾರ್ಗ ವಾರ್ತೆ
ಗಾಝ, ಡಿ. 12: ಗಾಝದಲ್ಲಿ ಇಸ್ರೇಲ್ ನಡೆಸುತ್ತಿರುವ ಮಾರಣ ಹೋಮವನ್ನು ವಿರೋಧಿಸಿ ಇಸ್ರೇಲ್ ಉತ್ಪನ್ನಗಳಿಗೆ ಬಹಿಷ್ಕರಿಸಲು ಕರೆ ನೀಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದೆ. ಬಹಿಷ್ಕಾರದ ಕರೆಗಳು ಎಕ್ಸ್, ಟಿಕ್ ಟೋಕ್ ಹಾಗೂ ವಾಟ್ಸಾಪ್ ಗುಂಪುಗಳಲ್ಲಿ ವ್ಯಾಪಕವಾಗಿ ಪ್ರಚಾರವಾಗುತ್ತಿವೆ.
ಬಹಿಷ್ಕರಿಸುವ ಉತ್ಪನ್ನಗಳನ್ನು ಪತ್ತೆ ಹಚ್ಚಲು ವಿವಿಧ ಆಪ್ಗಳು ಹೊರಬಂದಿದ್ದು ಇದರಲ್ಲಿ ಹಂಗರಿಯಲ್ಲಿರುವ ಫೆಲೆಸ್ತೀನಿ ವ್ಯಕ್ತಿ ಅಹ್ಮದ್ ಬಾಶ್ಬಾಶ್ರು ರೂಪಿಸಿದ ನೋ ಥ್ಯಾಂಕ್ಸ್ ಆಪ್ ಹೆಚ್ಚು ಖ್ಯಾತಿ ಗಳಿಸಿಕೊಂಡಿದೆ.
ಇದನ್ನು ಲಕ್ಷಕ್ಕೂ ಹೆಚ್ಚು ಜನರು ಡೌನ್ಲೋಡ್ ಮಾಡಿಕೊಂಡಿದ್ದು ಇಸ್ರೇಲ್ ಉತ್ಪನ್ನಗಳನ್ನು ಕೆಂಪು ಬಣ್ಣದಲ್ಲಿ ತೋರಿಸುವ ರೀತಿಯಲ್ಲಿ ರಚಿಸಿರುವುದು ಈ ಆಪ್ನ ವಿಶೇಷತೆಯಾಗಿದೆ.
https://www.boycotzionism.com/ ವೆಬ್ಸೈಟ್ನಲ್ಲಿ ಬಹಿಷ್ಕರಿಸಬೇಕಾದ ಉತ್ಪನ್ನಗಳ ಪಟ್ಟಿಯನ್ನು ಒದಗಿಸಲಾಗಿದೆ. ಅಡೀಡಸ್, ಏರಿಯಲ್, ಅಮೆಜಾನ್, ಕ್ಯಾರಿಫೋರ್, ಬರ್ಗರ್ ಕಿಂಗ್, ಕೊಕೊ ಕೋಲಾ, ಡೆಲ್, ಡಿಸ್ನಿ, ಡೌ, ಫಂಟ್, ಜಿಲೆಟ್, ಹೆಡ್ ಮತ್ತು ಶೋಲ್ಡರ್, H&M, HP, ಇಂಟೆಲ್, KFC, ಲೇಸ್, ಲಿಪ್ಟನ್, ಲೋರಿಯಲ್, ಮೆಕ್ಡೊನಾಲ್ಡ್ಸ್, ಮರ್ಸಿಡಿಸ್ ಬೆಂಜ್, ಮೌಂಟೇನ್ ಡ್ಯೂ, ಮ್ಯಾಕ್, ನೆಸ್ಕೆಫ್, ಓರಿಯೊ, ಓರಲ್ ಬಿ, ಪ್ಯಾಂಪರ್ಸ್, ಪೆಪ್ಸಿ, ಪಿಜ್ಜಾ ಹಟ್, ಪೂಮಾ, ಸೀಮೆನ್ಸ್, ಸ್ನಿಕರ್ಸ್, ಪ್ರಿಟ್, ಸ್ಟಾರ್ ಬಕ್ಸ್, ವಾಲ್ಮಾರ್ಟ್, ವಾಲ್ಟ್ ಡಿಸ್ನಿ, ಜರಾ, ಸೆವೆನ್ ಅಪ್, 5 ಸ್ಟಾರ್, ಅಜಿನೊಮೊಟೊ , ಬ್ಲೂಮ್ಬರ್ಗ್, ಬೋಂಡಿ ಮತ್ತು ಇನ್ನೂ ಅನೇಕ ಪರಿಚಿತ ಮತ್ತು ಪರಿಚಯವಿಲ್ಲದ ಕಂಪನಿಗಳು ಬಹಿಷ್ಕಾರ ಪಟ್ಟಿಯಲ್ಲಿವೆ.
ಬಹಿಷ್ಕಾರವು ಈಗಾಗಲೇ ಇಸ್ರೇಲ್ ಅನ್ನು ಬೆಂಬಲಿಸುವ ಕಾರ್ಪೊರೇಟ್ಗಳ ವ್ಯವಹಾರದಲ್ಲಿ ಪ್ರತಿಫಲಿಸಿದೆ. ಕೇವಲ ಸ್ಟಾರ್ಬಕ್ಸ್ 13 ಬಿಲಿಯನ್ ಡಾಲರ್ (ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು) ನಷ್ಟವನ್ನು ಅನುಭವಿಸಿದೆ. ಇಸ್ರೇಲಿ ಕಂಪೆನಿಗಳು ಮತ್ತು ಆರ್ಥಿಕ ಮತ್ತು ತಂತ್ರಜ್ಞಾನ ಸಹಾಯ ಮಾಡುವ ಕಂಪೆನಿಗಳನ್ನು ಬಹಿಷ್ಕರಿಸಲು ವಿವಿಧ ಸಂಘಟನೆಗಳು ಕರೆ ನೀಡಿದ್ದವು.












