ಬಂದರ್, ಟೆಂಪೋ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ರಕ್ತದಾನ ಶಿಬಿರ

0
459

ಸನ್ಮಾರ್ಗ ವಾರ್ತೆ

ಟೆಂಪೋ ಚಾಲಕ ಮತ್ತು ಮಾಲಕರ ಸಂಘ ಬಂದರ್ ಮಂಗಳೂರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಬ್ಯಾಂಕ್ ಸರಕಾರಿ ಲೇಡಿಗೋಷನ್ ಆಸ್ಪತ್ರೆ,
ಮತ್ತು ಲಯನ್ಸ್ ಕ್ಲಬ್ ಅಶೋಕ್ ನಗರ ಇದರ ಸಹಯೋಗದೊಂದಿಗೆ ಡಿಸೆಂಬರ್ 17ರಂದು ಬೆಳಿಗ್ಗೆ 8-30 ರಿಂದ 2 ಗಂಟೆಯ ತನಕ ಬಂದರ್ ನ ಉರ್ದು ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು.

ಈ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ
ಬಂದರ್ ಉತ್ತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅಝ್ಮತ್ ಅಲಿಯವರು ರಕ್ತ ದಾನದ ಮಹತ್ವ ಹಾಗು ಅದರ ಬೇಡಿಕೆಯ ಬಗ್ಗೆ ಸವಿವರವಾಗಿ ಸಭೆಯ ಮುಂದೆ ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ.
ಶ್ರೀಮತಿ ಪೂರ್ಣಿಮಾ. ಶ್ರೀಮತಿ.ಝೀನತ್ ಶಂಸುದ್ದೀನ್.
ಲಯನ್ಸ್ ಕ್ಲಬ್ ಇದರ ಅದ್ಯಕ್ಷರಾದ ಚರಣ್ ಅಳ್ವ.
ಮತ್ತು ಉರ್ದು ಶಾಲೆಯ ಅದ್ಯಕ್ಷರಾದ ಬಿ.ಮುಹಮ್ಮದ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ.ಕ.ಜಿಲ್ಲೆ. ಸರಕಾರಿ ಲೇಡಿಗೊಷನ್ ಆಸ್ಪತ್ರೆ ಮಂಗಳೂರು. ಇದರ ಜಿಲ್ಲಾ ಸಂಯೋಜಕರಾದ ಪ್ರವೀಣ್ ರವರು ಮಾತನಾಡಿ ಯಾರಿಗೆ ಯಾವ ಸಮಯದಲ್ಲಿ ರಕ್ತ ಕೊಡಬಹುದು, ರಕ್ತ ಕೊಡುವುದರಿಂದ ನಮಗೇನು ಲಾಭ ಇರುತ್ತದೆ ಎಂದು ಬಹಳ ಉತ್ತಮ ರೀತಿಯಲ್ಲಿ ಸಭೆಯಲ್ಲಿ ವಿವರಿಸಿದರು.

ಸ್ಥಳೀಯ ಬಂದರ್ ವಾರ್ಡ್ ನ ಕೋರ್ಪೇಟರ್ ರವರಾದ ಝೀನತ್ ಶಂಸುದ್ದೀನ್ ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.

ಈ ಶಿಬಿರದಲ್ಲಿ ಒಟ್ಟು 73 ಯೂನಿಟ್ ರಕ್ತ ಸಂಗ್ರಹವಾಗಿದೆ.

ಟೆಂಪೊ ಚಾಲಕ ಮತ್ತು ಮಾಲಕರ ಸಂಘದ ಅದ್ಯಕ್ಷರಾದ ಮಕ್ಬೂಲ್ ಅಹ್ಮದ್ ರವರು ಸಮಾರೋಪ ನುಡಿಗಳನ್ನಾಡಿದರು.

ಮುಹಮ್ಮದ್ ಕಾಸಿಮ್ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಧನ್ಯವಾದವಿತ್ತರು.