ಸನ್ಮಾರ್ಗ ವಾರ್ತೆ
ಬೆಂಗಳೂರು: ಸಾಲ ಪಡೆದುಕೊಂಡಿದ್ದ 150 ರೂಪಾಯಿ ಮರಳಿಸಲಿಲ್ಲ ಎಂದು ಜಗಳ ನಡೆದು 63 ವರ್ಷದ ವಯೋವೃದ್ಧನ ಹತ್ಯೆಯಲ್ಲಿ ಜಗಳ ಕೊನೆಗೊಂಡಿತು.
ಭಿನ್ನ ಸಾಮರ್ಥ್ಯದ ನಾಗರಾಜಪ್ಪ ಮೃತಪಟ್ಟಿದ್ದು ಚಿತ್ರದುರ್ಗ ಕೊಡಗಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಶೇಖರ್ ಎಂಬವರಿಂದ ನಾಗರಾಜಪ್ಪ ನೂರೈವತ್ತು ರೂಪಾಯಿ ಸಾಲ ಪಡೆದುಕೊಂಡಿದ್ದರು. ಇದನ್ನು ನಾಗರಾಜಪ್ಪ ಮರಳಿಸಲು ವಿಫಲರಾಗಿದ್ದರು. ಶೇಖರ್ ಮತ್ತು ನಾಗರಾಪ್ಪರ ನಡುವೆ ಜಗಳ ನಡೆಯಿತು.
ಇತ್ತೀಚೆಗೆ ಶೇಖರ್ ನಾಗರಾಜಪ್ಪರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಹಣ ಮರಳಿ ಕೊಡುತ್ತೇನೆ ಎಂದು ಆಣೆ ಹಾಕಿಸಿದ್ದ.
ಆದರೆ ನಾಗರಾಜಪ್ಪ ಸಾಲದ ಹಣ ಕೊಡಲಿಲ್ಲ. ಇದರಿಂದ ಶೇಖರ್ ಕುಪಿತಗೊಂಡು ನಿನ್ನೆ ಇಬ್ಬರ ನಡುವೆ ಜಗಳ ಆಗಿದೆ. ಶೇಖರ್ ಕಲ್ಲಿನಿಂದ ನಾಗರಾಜಪ್ಪರ ತಲೆಗೆ ಜಜ್ಜಿ ಕೊಲೆ ಮಾಡಿದ್ದಾನೆ. ಘಟನಾ ಸ್ಥಳದಲ್ಲಿಯೇ ನಾಗರಾಜಪ್ಪ ಮೃತಪಟ್ಟಿದ್ದಾರೆ.












