ದಿಲ್ಲಿ, ಮುಂಬೈ, ಕೊಚ್ಚಿ ಸಹಿತ ಭಾರತದಲ್ಲಿ ಕತರ್‌ನಿಂದ 7 ವೀಸಾ ಕೇಂದ್ರಗಳು ಆರಂಭ

0
1047

ದೋಹ,ಎ.8: ಕೊಚ್ಚಿ ಸಹಿತ ಭಾರತದ ಏಳು ಕತರ್ ವೀಸಾ ಸೇವಾ ಕೇಂದ್ರಗಳ ಚಟುವಟಿಕೆಗಳು ಆರಂಭವಾಗಿದೆ. ದಿಲ್ಲಿ, ಮುಂಬೈ, ಕೊಲ್ಕತಾ, ಲಕ್ನೊ, ಹೈದರಾಬಾದ್, ಚೆನ್ನೈಗಳಲ್ಲಿ ಕಳೆದ ದಿವಸ ಕೇಂದ್ರಗಳ ಉದ್ಘಾಟನೆ ಆಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ(8:30-5:30) ಎಂಟೂವರೆ ಗಂಟೆಯಿಂದ ಸಂಜೆ ಐದೂವರೆ ಗಂಟೆಯವರೆಗೆ ಕೇಂದ್ರ ತೆರೆದಿರುತ್ತವೆ. 00914461331333 ಫೋನ್ ನಂಬರಿಗೆ ಮತ್ತು [email protected] ಎಂಬ ಇಮೇಲ್ ನಂಬರ್‍ಗೆ ಕೇಂದ್ರವನ್ನು ಸಂಪರ್ಕಿಸಬಹುದು. ಅನಿವಾಸಿ ಕಾರ್ಮಿಕರಿಗೆ ಕತರ್ ರೆಸಿಡೆನ್ಸ್ ಪರ್ಮಿಟ್(ಆರ್‍ಪಿ)ಅನ್ನು ಅವರದೇ ದೇಶದಲ್ಲಿ ಪಡೆಯಲು ಸೌಲಭ್ಯವಾಗಿದೆ.

ಗೃಹಸಚಿವಾಲಯ ಕಚೇರಿಯ ಸಲಹೆಗಾರ ಮೇಜರ್ ಜನರಲ್ ಅಬ್ದುಲ್ಲ ಸಲೀಂ ಅಲ್‍ಅಲಿ, ಜನರಲ್ ಡೈರಕ್ಟರೇಟ್ ಆಫ್ ಪಾಸ್‍ಪೋಟ್ರ್ಸ್‍ನ ವೀಸಾ ಸಪೋರ್ಟ್ ಸರ್ವಿಸಸ್ ಇಲಾಖೆ ನಿರ್ದೇಶಕ ಮೇಜರ್ ಅಬ್ದುಲ್ಲ ಖಲೀಫ ಅಲ್‍ಮುಹನ್ನದಿ, ವೀಸಾ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ನಾಸರ್ ಅಲ್‍ಖಲಫ್, ವೀಸಾ ಸಪೋರ್ಟ್ ಸರ್ವಿಸಸ್‍ನ ತಾಂತ್ರಿಕ ಅಧ್ಯಯನ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ಖಾಲಿದ್ ಅಲ್‍ ನುಐಮಿ, ಭಾರತ ಸರಕಾರದ ವಿವಿಧ ಅಧಿಕಾರಿಗಳು ಮತ್ತು ಅಧಿಕಾರಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಭಾರತವಲ್ಲದೆ ಶ್ರೀಲಂಖಾ, ನೇಪಾಳ, ಬಾಂಗ್ಲದೇಶ, ಪಾಕಿಸ್ತಾನ, ಫಿಲಿಪ್ಪೀನ್ಸ್, ಇಂಡೊನೇಶಿಯ, ಟುನಿಷ್ಯ, ಸಹಿತ 20 ದೇಶಗಳಲ್ಲಿ ವೀಸಾ ಕೇಂದ್ರಗಳನ್ನು ತೆರೆಯುವ ಗುರಿಯನ್ನಿರಿಸಲಾಗಿದೆ ಎಂದು ಮೇಜರ್ ಅಬ್ದುಲ್ಲ ಖಲೀಫ ಅಲ್‍ಮುಹನ್ನದಿ ಹೇಳಿದರು. ಈಗಾಗಲೇ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನಗಳಲ್ಲಿ ವೀಸಾ ಕೇಂದ್ರ ಆರಂಭವಾಗಿದೆ.