ಯುಎಇ: ಮಹಿಳೆಗೆ ಕಾರಿನಲ್ಲೇ ಹೆರಿಗೆ

0
686

ಶಾರ್ಜ,ಎ.8: ರವಿವಾರ ಬೆಳಗ್ಗೆ ಶಾರ್ಜದ ಆಸ್ಪತ್ರೆಯ ಎಮೆರ್ಜನ್ಸಿ ವಾರ್ಡಿನ ಮುಂದೆ ನಿಲ್ಲಿಸಿದ ಕಾರಿನೆಡೆಗೆ ವೈದ್ಯರು ಮತ್ತು ದಾದಿಯರು ಓಡುವುದು ಕಂಡು ಏನು ಸಮಾಚಾರ ಎಂದು ಅರಿಯದೆ ಜನರು ಆಶ್ಚರ್ಯ ಗೊಂಡರು. ಓರ್ವ ಮಹಿಳೆ ಮತ್ತು ನವಜಾತ ಶಿಶುವನ್ನು ಕಾರಿನಿಂದ ಎತ್ತಿಕೊಂಡು ಸ್ಟ್ರಚ್ಚರ್‍ನಲ್ಲಿ ಮಲಗಿಸಿ ಆಸ್ಪತ್ರೆಗೆ ಧಾವಿಸಿದ್ದು ಕಂಡಾಗ ಜನರು ಮತ್ತಷ್ಟು ಆತಂಕಗೊಂಡರು.

ವಿಷಯ ತಿಳಿದಾಗ ಎಲ್ಲರೂ ಸಂತೋಷದಲ್ಲಿ ಮಬ್ರೂಕ್(ಶುಭಹಾರೈಕೆ) ಎಂದು ಹೇಳತೊಡಗಿದರು. ಹೆರಿಗೆ ನೋವಿನಿಂದ ಆಸ್ಪತ್ರೆಗೆ ಕರೆತಂದ ಮಹಿಳೆಯೊಬ್ಬರಿಗೆ ಕಾರಿನಲ್ಲಿಯೇ ಹೆರಿಗೆಯಾಗಿತ್ತು. ಹೆರಿಗೆ ವಾರ್ಡಿಗೆ ತಾಯಿ ಮಗುವನ್ನು ವರ್ಗಾಯಿಸಲಾಗಿದ್ದು ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.