ಅಬ್ದುಲ್ ಗಫೂರ್ ಕುಳಾಯಿಗೆ ಮಾತೃ ವಿಯೋಗ

0
345

ಸನ್ಮಾರ್ಗ ವಾರ್ತೆ

ಜಮಾಅತೆ ಇಸ್ಲಾಮಿ ಹಿಂದ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬ್ದುಲ್ ಗಫೂರ್ ಕುಳಾಯಿ ಅವರ ತಾಯಿ ಫಾತಿಮಾ(70) ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಮಾರ್ಚ್ 13 ರಂದು ನಿಧನರಾದರು.

ಸನ್ಮಾರ್ಗ ಪತ್ರಿಕೆಯ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದ ಅವರು ಆರಂಭ ಕಾಲದಲ್ಲೇ ಸನ್ಮಾರ್ಗದ ಓದುಗರಾಗಿದ್ದರು.

ಮೃತರು ಪತಿ ಅಬ್ದುಲ್ ಕಾದರ್ ಅವರನ್ನೂ ಮೂರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನೂ ಅಪಾರ ಬಂಧು ಬಾಂಧವರನ್ನೂ ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಬಂದರ್ ಜುಮಾ ಮಸೀದಿ ವಠಾರದಲ್ಲಿ ಅಸರ್ ನಮಾಝ್ ಬಳಿಕ ನೆರವೇರಿತು. ಮೃತರಿಗೆ ಅಲ್ಲಾಹನು ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ.