ಹೊಸದಿಲ್ಲಿ,ಎ.9: ಕೇಂದ್ರ ಸರಕಾರದ ನೋಟು ನಿಷೇಧದ ಕುರಿತು ಕಪಿಲ್ ಸಿಬಲ್ ಬೆಚ್ಚಿಬೀಳುವ ವಿವರವನ್ನು ಬಹಿರಂಗಗೊಳಿಸಿದ್ದಾರೆ. ನೋಟು ಅಮಾನ್ಯಗೊಳಿಸುವ ಮೊದಲು ಹೊಸ ನೋಟುಗಳನ್ನು ದೇಶದ ಹೊರಗೆ ಮುದ್ರಿಸಲಾಯಿತು ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಆರೋಪಿಸಿದರು. ಮೂರು ಸೀರಿಯಲ್ನ ನೋಟುಗಳು ಮುದ್ರಣಗೊಂಡಿದ್ದವು. ಈ ನೋಟುಗಳನ್ನು ಭಾರತಕ್ಕೆ ವಾಯುಸೇನೆಯ ವಿಮಾನದ ಮೂಲಕ ಭಾರತಕ್ಕೆ ತರಲಾಯಿತು ಎಂದರು.
ಮಹಾರಾಷ್ಟ್ರ ಇಂಡಸ್ಟ್ರೀಯಲ್ ಕಾರ್ಪೊರೇಷನ್ ಗೋಡೌನ್ನ ದೃಶ್ಯಗಳನ್ನು ಬಯಲುಗೊಳಿಸಿ ಕಪಿಲ್ ಸಿಬಲ್ ಆರೋಪ ಹೊರಿಸಿದ್ದಾರೆ. ಒಂದೇ ಬಾರಿ 320 ಕೋಟಿ ರೂಪಾಯಿ ಬದಲಾಯಿಸಲಾಯಿತು ಮತ್ತು ಈಗಲೂ ಅಮಾನ್ಯ ನೋಟುಗಳನ್ನು ಬದಲಿಸಲಾಗುತ್ತಿದೆ ಎಂದು ಸಿಬಲ್ ಹೇಳಿದರು.
ಸರಕಾರಿ ಅಧಿಕಾರಿಗಳು ಮತ್ತು ಬ್ಯಾಂಕ್ ನೌಕರರು ಇದಕ್ಕೆ ನೇತೃತ್ವವನ್ನು ನೀಡಿದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾರ ಅರಿವಿನಲ್ಲಿದ್ದೇ ಎಲ್ಲವೂ ನಡೆಯಿತೆಂದು ಕಪಿಲ್ ಸಿಬಲ್ ಆರೋಪಿಸಿದರು.












