ಬೆಂಗಳೂರು: ಚಾಮರಾಜಪೇಟೆಯಲ್ಲಿ ಸೌಹಾರ್ದ ಇಫ್ತಾರ್ ಕೂಟ

0
521

ಸನ್ಮಾರ್ಗ ವಾರ್ತೆ

“ದೇಶದ ಅಭಿವೃದ್ಧಿ ಕೇವಲ ವಿಜ್ಞಾನ ತಂತ್ರಜ್ಞಾನದಿಂದ ಮಾತ್ರ ಸಾಧ್ಯವಿಲ್ಲ ಅದರ ಜೊತೆಗೆ ನೈತಿಕತೆಯು ಕೂಡಾ ಜೀವನದ ಪ್ರಮುಖ ಮೌಲ್ಯವಾಗಬೇಕು, ಜನರು ಸಚ್ಚಾರಿತ್ರ್ಯವನ್ನು ಮೈಗೂಡಿಸಿಕೊಂಡು ಬದುಕಿದಾಗ ಮಾತ್ರ ಒಂದು ಸುಂದರ ಸಮಾಜ ಕಟ್ಟಲು ಸಾಧ್ಯ” ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ ಅಲ್ಲಿ ಉಡುಪಿ ಹೇಳಿದರು.

ಅವರು ಇತ್ತೀಚೆಗೆ ಸ್ಥಳೀಯ ಚಾಮರಾಜಪೇಟೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ರಸ್ತೆ ಹಾಗೂ ಕೆನರಾ ಕಂಪ್ಯೂಟರ್ಸ್ ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಂತ ಸೌಹಾರ್ದ ಇಫ್ತಾರ್ ಕೂಟವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕೆನರಾ ಕಂಪ್ಯೂಟರ್ಸ್ ನಿರ್ವಾಹಕ ಶ್ರೀ ಪರಶುರಾಮ್ ಮಾತನಾಡಿ “ಮನುಷ್ಯರ ಹೃದಯಗಳನ್ನು ಬೆಸೆಯುವ ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಲಿ” ಎಂದು ಹಾರೈಸಿದರು.

ರಿಯಾಝ್ ಅಹ್ಮದ್ ರೋಣ, ಸಹ ಕಾರ್ಯದರ್ಶಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ತಮ್ಮ ಪ್ರಸ್ತಾವಿಕ ಭಾಷಣದಲ್ಲಿ “ದೇವರನ್ನು ನಾವೆಲ್ಲರೂ ಪ್ರೀತಿಸಿದಂತೆ ದೇವರ ದಾಸರನ್ನೂ ಕೂಡ ಪ್ರೀತಿಸಬೇಕು ಎಂದು ಹೇಳಿದರು.

ಇಮ್ರಾನ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಸ್ಥಾನಿಯ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಗುಡಿಯಾಳ, ಸಾಮಾಜಿಕ ಕಾರ್ಯಕರ್ತ ನಾಗೇಶ್ ಮುಂತಾದರು ಉಪಸ್ಥಿತರಿದ್ದರು.