ಸನ್ಮಾರ್ಗ ವಾರ್ತೆ
ಲಕ್ನೊ,ಮಾ.29: ಐದು ಬಾರಿ ಉತ್ತರಪ್ರದೇಶದಲ್ಲಿ ಶಾಸಕರಾಗಿದ್ದ ಮುಕ್ತಾರ್ ಅನ್ಸಾರಿ(63) ಸಾವು ನಿಗೂಢವಾಗಿದ್ದು, ಜೈಲಿನಲ್ಲಿ ವಿಷಕೊಟ್ಟು ಕೊಲೆ ಮಾಡಲಾಗಿದೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಿಸಿ ನಾವು ಕೋರ್ಟಿಗೆ ಹೋಗುವುದಾಗಿ ಅವರ ಪುತ್ರ ಉಮರ್ ಅನ್ಸಾರಿ ತಿಳಿಸಿದ್ದಾರೆ. ಮಂಗಳವಾರ ಮುಕ್ತಾರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆ ತಂದಾಗ ಇದೇ ಆರೋಪವನ್ನು ಅವರ ಸಹೋದರ ಗಾಝಿಪುರದ ಸಂಸದ ಅಫ್ಝಲ್ ಅನ್ಸಾರಿ ಎತ್ತಿದ್ದರು.
ಜೈಲಿನಲ್ಲಿ ಆಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ವಿಷಯವನ್ನು ಬೆರೆಸಿ ಆಹಾರ ನೀಡಲಾಗುತ್ತಿತ್ತು ಎಂದು ಸಂಬಂಧಿಕರು ಹೇಳುತ್ತಿದ್ದಾರೆ. ಮೂವರು ಸದಸ್ಯರ ತಂಡ ಘಟನೆಯಲ್ಲಿ ತನಿಖೆ ಮಾಡಲಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ತನಗೆ ಆಹಾರದೊಂದಿಗೆ ವಿಷ ಕೊಡಲಾಗಿದೆ. ಮಾರ್ಚ್ 19ಕ್ಕೆ ಆಹಾರ ಸೇವಿಸಿದ ಮೇಲೆ ನರಗಳು ಕೈಕಾಲುಗಳಲ್ಲಿ ನೋವು ಕಾಣಿಸಿಕೊಳ್ಳಲಾರಂಭಿಸಿತು ಎಂದು ಅನ್ಸಾರಿ ಮಾರ್ಚ್ 20ಕ್ಕೆ ವೀಡಿಯೊ ಕಾನ್ಫರೆನ್ಸ್ ವಿಚಾರಣೆಯಲ್ಲಿ ಕೋರ್ಟಿಗೆ ತಿಳಿಸಿದ್ದರು. ಇದಕ್ಕೆ ಸಂಬಂಧಿಸಿ ಕೋರ್ಟಿಗೆ ಬರಹ ಮೂಲಕ ದೂರು ನೀಡಲಾಗಿತ್ತು.
ಅನ್ಸಾರಿಯವರ ದೂರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಸಮಾಜವಾದಿ ಪಾರ್ಟಿ ಹೇಳಿವೆ.
ಆದರೆ ಜೈಲು ಅಧಿಕಾರಿಗಳು ವಿಷ ಪ್ರಾಶನದ ಬಗ್ಗೆ ಒಪ್ಪಿಕೊಂಡಿಲ್ಲ. ಗುರುವಾರ ಪೋಸ್ಟ್ ಮಾರ್ಟಂ ನಡೆಯಲಿದ್ದು ಅಗತ್ಯವಿದ್ದರೆ ಅದನು ವೀಡಿಯೊ ಚಿತ್ರೀಕರಿಸಲಾಗವುದು , ಅಗತ್ಯವಾದರೆ ಆಂತರಿಕ ಅವಯಗಳನ್ನು ಕೂಡ ಸರಕ್ಷಿತಗೊಳಿಸಿ ಇಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಂದದ ಜೈಲಿನಲ್ಲಿ ಅನ್ಸಾರಿ ವಾಂತಿ ಮಾಡತೊಡಗಿದರು. ಗುರುವಾರ ರಾತ್ರೆ ಅವರನ್ನು ಬದರಾಣಿ ದುರ್ಗಾವತಿ ಮೆಡಿಕಲ್ ಕಾಲೇಜಿಗೆ ತಲುಪಿಸಲಾಗಿತ್ತು. ಹೃದಯಾಘಾತ ಸಾವಿಗೆ ಕಾರಣವೆಂದು ಆಸ್ಪತ್ರೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಅನ್ಸಾರಿಯ ನಂತರ ಬಂದ, ಮೌ, ಗಾಝಿಪುರ, ವಾರಣಾಸಿಯಲ್ಲಿ ಭಾರೀ ಪೊಲೀಸ್ ಬಂದೋಬಸ್ತು ಮಾಡಿದ್ದಾರೆ.
ಸರಕಾರಕ್ಕೆ ಮಾಫಿಯ ಮುಖ್ಯಸ್ಥರು ಅತೀಕ್ ಅಹ್ಮದ್ ಅವರ ಸಹೋದರನ ಹತ್ಯೆ ಕಳೆದ ವರ್ಷ ಕೋರ್ಟಿಗೆ ಕರೆ ತರುವಾಗ ಪತ್ರಕರ್ತರ ವೇಷದಲ್ಲಿ ಬಂದಿದ್ದ ಮೂವರು ಹುಡುಗರು ಹತ್ಯೆ ಮಾಡಿದ್ದರು. ಇಲ್ಲಿ ಮುಖ್ತಾರ್ ಜೈಲಿನಲ್ಲಿ ಸ್ಲೋಪಾಯಿಸನ್ ಹತ್ಯೆ ಎಂದು ಆರೋಪಿಸಲಾಗುತ್ತಿದೆ.












