ಸನ್ಮಾರ್ಗ ವಾರ್ತೆ
ಮಂಗಳೂರು: ದಿಲ್ಲಿಯ ಪ್ರತಿಷ್ಠಿತ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಕೇಂದ್ರೀಯ ವಿಶ್ವ ವಿದ್ಯಾಲಯ ನಡೆಸಿದ ಎಲ್ ಎಲ್ ಎಂ ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ನಿಹಾಲ್ ಮುಹಮ್ಮದ್ ರಾಷ್ಟ್ರ ಮಟ್ಟದಲ್ಲಿ ಏಳನೇ ರ್ಯಾಂಕ್ ಪಡೆದು ಸರಕಾರಿ ಕೋಟಾದ ಸೀಟ್ ಗೆ ಆಯ್ಕೆಯಾಗಿದ್ದಾರೆ.
ನಗರದ ಕುದ್ರೋಳಿಯ ಅಬ್ದುಲ್ ನಿಝಾರ್ ಹಾಗು ಖಾಲಿಸ ನಿಝಾರ್ ದಂಪತಿಗಳ ಸುಪುತ್ರ ನಿಹಾಲ್ ಮುಹಮ್ಮದ್ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಬಳಿಕ ಆಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಎಲ್ ಎಲ್ ಬಿ ಪದವಿ ಪಡೆದಿದ್ದಾರೆ. ಎಸ್ ಐ ಒ ವಿದ್ಯಾರ್ಥಿ ಸಂಘಟನೆಯ ಸದಸ್ಯರು, ಸ್ಥಾನೀಯ ಹಾಗೂ ಜಿಲ್ಲಾ ಮಟ್ಟದ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದಾರೆ.