ರಾಹುಲ್‍ಗಾಂಧಿ ಭಾರತದಲ್ಲಿಯೇ ಜನಿಸಿದ್ದಾರೆ,ಇದು ಎಲ್ಲರಿಗೂ ಗೊತ್ತು – ಪ್ರಿಯಾಂಕಾ ಗಾಂಧಿ

0
1707

ಅಮೇಠಿ,ಎ.30: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹುಟ್ಟಿ ಬೆಳೆದಿರುವುದು ಭಾರತದಲ್ಲಿ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ ಎಂದು ರಾಹುಲ್ ಸಹೋದರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿಗೆ ವಿದೇಶಿ ನಾಗರಿಕತೆ ಇದೆ ಎಂದು ಸರಕಾರ ಕಳುಹಿಸಿದ ನೋಟಿಸಿನ ಕುರಿತು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಇಂತಹ ಅಸಂಬದ್ಧವನ್ನು ತಾನು ಈವರೆಗೆ ಕೇಳಿಲ್ಲ ಎಂದು ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಿದರು.ರಾಹುಲ್ ಇಲ್ಲಿಹುಟ್ಟಿದ್ದಾರೆ. ಬೆಳೆದಿದ್ದಾರೆ. ಇವೆಲ್ಲ ಎಲ್ಲರಿಗೂ ಗೊತ್ತಿದೆ. ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿಯ ದೂರಿನಲ್ಲಿ ಹದಿನೈದು ದಿವಸದೊಳಗೆ ಉತ್ತರಿಸುವಂತೆ ಗೃಹ ಸಚಿವಾಲಯ ರಾಹುಲ್‍ ಗಾಂಧಿಗೆ ನೋಟಿಸು ಕಳುಹಿಸಿದೆ. ರಾಹುಲ್ ಬ್ರಿಟಿಷ್ ಪ್ರಜೆ ಎಂದು ಹೇಳಿಕೊಂಡಿದದಾರೆ ಎಂದು ಸುಬ್ರಮಣಿಯನ್ ಸ್ವಾಮಿ ದೂರಿನಲ್ಲಿ ಆರೋಪಿಸಿದ್ದಾರೆ.