ಶ್ರೀಲಂಕಾ ಸರಣಿ ಬಾಂಬ್ ಸ್ಪೋಟವನ್ನು ವಿರೋಧಿಸಿ ವಿವಿಧ ಧಾರ್ಮಿಕ ಮುಖಂಡರಿಂದ ಸಭೆ

0
1551

ಜೈಪುರ, ಏಪ್ರಿಲ್ 25, 2019: ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟವನ್ನು ವಿರೋಧಿಸಿ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು ಧಾರ್ಮಿಕ್ ಜನ-ಮೋರ್ಚಾ ರಾಜಸ್ಥಾನ ಘಟಕದಲ್ಲಿ ಒಟ್ಟು ಸೇರುವ ಮೂಲಕ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಆರ್ಯ ಸಮಾಜದ ಸತ್ಯವ್ರತ್ ಸಮಾವೇದಿ, ಗಾಯತ್ರಿ ಶಕ್ತಿ ಪೀಠದಿಂದ ರಾಮರಾಯ್ ಶರ್ಮಾ, ಕ್ರಿಶ್ಚಿಯನ್ ಸಮಾಜದ ಫಾದರ್ ಶಿಬು ಮತ್ತು ಫಾದರ್ ವಿಜಯ ಪಾಲ್ ಸಿಂಗ್, ಬೌದ್ಧ ಧರ್ಮ ಗುರುಗಳಾದ ಕಶ್ಯಪ್ ಆನಂದ, ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಸಲೀಂ ಎಂಜಿನಿಯರ್, ಎಫ್‌ಡಿಸಿ‌ಎ ರಾಜಸ್ಥಾನದ ಪ್ರದೇಶಾಧ್ಯಕ್ಷರಾದ ಸವಾಯಿ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. ಪತ್ರಿಕಾ ಗೋಷ್ಟಿಯಲ್ಲಿ ಸಿಖ್ ಸಮಾಜದಿಂದ ಸರ್ದಾರ್ ಸತ್ವಂತ್ ಸಿಂಗ್ ಮತ್ತು ಜೈನ ಸಮಾಜದಿಂದ ಜಿ.ಎಲ್.ನಹಾರ್‌ರವರು ಅನಾರೋಗ್ಯದಿಂದಾಗಿ ಉಪಸ್ಥಿತರಿರಲಿಲ್ಲವಾದರೂ ಅವರು ತಮ್ಮ ಸಂದೇಶವನ್ನು ಕಳುಹಿಸಿದರು.

ಶ್ರೀಲಂಕಾದ ಬಾಂಬ್ ಸ್ಫೋಟಗಳಲ್ಲಿ, 321 ಮುಗ್ಧ ಜನರು ತಮ್ಮ ಪ್ರಾಣ ಕಳೆದುಕೊಂಡರು, ನೂರಾರು ಜನರು ಗಾಯಗೊಂಡರು. ಪತ್ರಿಕಾ ಗೊಷ್ಟಿಯನ್ನುದ್ದೇಶಿಸಿ ಮಾತನಾಡಿದ “ಡಾ. ಸಲೀಂ ಇಂಜಿನಿಯರ್‌ರವರು,” ಧರ್ಮಗಳಿಗೆ ಈ ಘಟನೆಯೊಂದಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಧರ್ಮಗಳೆಲ್ಲವೂ ಮಾನವರನ್ನು ಮಾನವರೊಂದಿಗೆ ಜೋಡಿಸುತ್ತವೆಯೇ ಹೊರತು ಅವುಗಳು ಅವರನ್ನು ಬೇರ್ಪಡಿಸುವುದಿಲ್ಲ. ಮನುಷ್ಯರನ್ನು ಮನಯಷ್ಯರಿಂದ ದೂರ ಸರಿಯುವಂತೆ ಮಾಡುವುದು ಧರ್ಮವೇ ಅಲ್ಲ. ಇಂತಹ ಹಿಂಸಾಕಾಂಡದ ಹಿಂದಿರುವ ರೂವಾರಿಗಳನ್ನು ಸಮಾಜದ ಮುಂದೆ ಕಠಿಣವಾಗಿ ಶಿಕ್ಷಿಸಬೇಕಾದ ಅಗತ್ಯತೆ ಇದೆ. ಕಳೆದ ಬಾರಿ ನ್ಯೂಜಿಲೆಂಡ್‌ ನಲ್ಲಿಯೂ ಕೂಡ ಇಂತಹದ್ದೇ ಘಟನೆಯು ಸಂಭವಿಸಿತ್ತು” ಎಂದರು. ಈ ಘಟನೆಯನ್ನು ಖಂಡಿಸಿದ ಶ್ರೀ ಶ್ರೀ ಸತ್ಯವ್ರತ್ ಸಮಾವೇದಿಯವರು” ನಮ್ಮ ದೇಶದಲ್ಲಿ ಅಹಿಂಸೆಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ. ಆದುದರಿಂದ ಹಿಂಸೆಯನ್ನು ಯಾವುದೇ ರೀತಿಯಿಂದ ಇಲ್ಲಿ ಪ್ರತಿಪಾದಿಸಲು ಅವಕಾಶವಿಲ್ಲ” ಎಂದರು. ಫಾದರ್ ಶಿಬುರವರು ಮಾತನಾಡುತ್ತಾ, ಯೇಸುಕ್ರಿಸ್ತರೊಂದಿಗೆ ಮೃತರಾಗಿ ಪುನರುಜ್ಜೀವನ ಪಡೆದವರ ಕುರಿತ ಸಂತೋಷವನ್ನು ಆಚರಿಸುತ್ತಿದ್ದ ವೇಳೆ ಇಂತಹ ಘಟನೆಯು ಸಭವಿಸಿದ್ದು ದುರಾದೃಷ್ಟಕರ.‌ ಮೃತರ ಕುಟುಂಬಗಳಿಗೆ ದೇವನು ಸಹನೆಯನ್ನು ದಯಪಾಲಿಸಲಿ” ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಬೌದ್ಧ ಗುರುಗಳಾದ ಕಶ್ಯಪ್ ಆನಂದ್ ರವರು” ಮೃಗೀಯತೆಯು ಪ್ರಾಣಿಗಳಲ್ಲಿ ಕಂಡು ಬರುವ ಗುಣವಾಗಿದೆ. ಆದರೆ ಇಂದು ಮೃಗೀಯತೆಯು ಪ್ರಾಣಿಗಳಿಗಿಂತಲೂ ಮನುಷ್ಯರಲ್ಲಿಯೇ ಅಧಿಕವಾಗಿ ಕಂಡುಬರುತ್ತಿರುವುದು ವಿಪರ್ಯಾಸಕರ” ಎಂದರು. ಫಾದರ್ ವಿಜಯಪಾಲ್ ರವರು ಮಾತನಾಡುತ್ತಾ, ” ಈ ಘಟನೆಯಿಂದ ಎಲ್ಲ ಭಾರತವಾಸಿಗಳೂ ದುಃಖಿತರಾಗಿದ್ದಾರೆ. ಶ್ರೀಲಂಕಾದ ಜನತೆಗೆ ಈ ಘಟನೆಯಿಂದ ಚೇತರಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ” ಎಂದರು. “ಜಗತ್ತಿನಲ್ಲಿ ಭೌತಿಕ ಬೆಳವಣಿಗಳೆಗಳು ಹೆಚ್ಚುತ್ತಾ , ಮಾನವರ ಆಂತರಿಕ ಬೆಳವಣಿಗೆಯು ಕುಂಠಿತವಾಗುತ್ತಾ ಹೋದಲ್ಲಿ ಇಂತಹ ವಿಕಾಸದಿಂದ ಸಮಾಜಕ್ಕೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಇಂತಹ ಘಟನೆಗಳಿಂದ ಯಾರಿಗೆ ಲಾಭವಿದೆ ಎಂಬುದನ್ನು ಅರಿತುಕೊಳ್ಳುವಲ್ಲಿ ಸಫಲರಾದರೆ ಈ ಘಟನೆಗಳ ಹಿಂದೆ ಯಾರಿದ್ದಾರೆಂಬುದನ್ನು ಜನರಿಗೆ ತಿಳಿಯುವುದು ಸುಲಭಕರ” ಎಂದು ಶ್ರೀ ಸವಾಯಿಸಿಂಹ್ ರವರು ಹೇಳಿದರು. ಶ್ರೀ ರಾಮರಾಯ್ ಶರ್ಮಾರವರು ಮಾತನಾಡುತ್ತಾ” ಶ್ರೀಲಂಕಾದಲ್ಲಿ ಸಂಭವಿಸಿದ ಈ ದುರ್ಘಟನೆಯಿಂದ ನಾವೆಲ್ಲರೂ ದುಃಖಿತರಾಗಿದ್ದೇವೆ. ದೇವರು ಈ ಘಟನೆಯಲ್ಲಿ ಮಡಿದವರ ಆತ್ಮಗಳಿಗೆ ಶಾಂತಿಯನ್ನು ನೀಡಲಿ, ಅಲ್ಲದೇ ಈ ದುಷ್ಕೃತ್ಯವನ್ನು ಎಸಗಿದವರಿಗೆ ದೇವರು ಸದ್ಬುದ್ಧಿಯನ್ನು ದಯಪಾಲಿಸಲಿ” ಎಂದರು.

ಎಲ್ಲ ಧಾರ್ಮಿಕ ಮುಖಂಡರು ಈ ಘಟನೆಯ ಕುರಿತು ಸಂತಾಪ ವ್ಯಕ್ತ ಪಡಿಸಿದರಲ್ಲದೇ, ಈ ಘಟನೆಯ ಹಿಂದಿರುವ ಪ್ರಮುಖ ಆರೋಪಿಗಳನ್ನು ಶಿಕ್ಷಿಸಲು ಮುಂದಾಗಬೇಕೆಂದೂ ಯಾವುದೇ ಒಂದು ಧರ್ಮವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಪರಿಸ್ಥಿತಿ ಗಳನ್ನು ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆದು ನೈಜ ಆರೋಪಿಗಳನ್ನೂ, ಈ ಘಟನೆಯಿಂದ ಲಾಭ ಪಡೆಯಲು ಮುಂದಾಗುತ್ತಿರುವ ಆರೋಪಿಗಳನ್ನು ಕಾನೂನಾತ್ಮಕವಾಗಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂಬ ಆಶಯವು ಒಕ್ಕೊರಲಿನಿಂದ ಪ್ರಕಟಿಸಿದರು. ಶ್ರೀಲಂಕಾ ಸರಕಾರವು ಈ ಘಟನೆಗೆ ಸಂಬಂಧಿಸಿದಂತೆ ಶೀಘ್ರ ತನಿಖೆಯನ್ನು ಕೈಗೊಳ್ಳುವಂತೆಯೂ ಹಾಗೂ ಭದ್ರತೆಯನ್ನು ಹೆಚ್ಚಿಸುವಂತೆಯೂ ಕರೆ ನೀಡಿದರು. ಹಿಂಸೆಗೆ ಕಾರಣಗಳಾವುವು ಎಂಬುದನ್ನು ಅರಿತು ಅವುಗಳನ್ನು ಮಟ್ಟಹಾಕಲು ಎಲ್ಲ ದೇಶಗಳೂ ಶ್ರಮಿಸಬೇಕೆಂದು ಧಾರ್ಮಿಕ ಮುಖಂಡರು ಈ ಸಂದರ್ಭದಲ್ಲಿ ಕರೆ ನೀಡಿದರು.

हिंसा करने वाले कोई भी हों उन्हें बेनक़ाब किया जाना चाहिए। कुछ दिनों पहले न्यूज़ीलेंड में भी इसी प्रकार की घटना हुई थी,…

Posted by Jamaat-e-Islami Hind on Friday, April 26, 2019