ಬ್ರದರ್‌ಹುಡ್‍ನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸುವ ಅಮೆರಿಕದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಇರಾನ್

0
482

ಟೆಹ್ರಾನ್,ಮೇ 3: ಮುಸ್ಲಿಂ ಬ್ರದರ್‍ಹುಡ್‍ನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಅಮೆರಿಕದ ಕ್ರಮವನ್ನು ಇರಾನ್ ತೀವ್ರವಾಗಿ ವಿರೋಧಿಸಿದೆ. ಇತರರನ್ನು ಭಯೋತ್ಪಾದಕರನ್ನಾಗಿಸಲು ಅಮೆರಿಕಕ್ಕೆ ಯಾವುದೇ ಅರ್ಹತೆಯಿಲ್ಲ. ಈ ವಿಷಯದಲ್ಲಿ ಅಮೆರಿಕ ನಡೆಸುವ ಎಲ್ಲ ಪ್ರಯತ್ನಗಳನ್ನು ನಾವು ವಿರೋಧಿಸುತ್ತೇವೆ ಎಂದು ಇರಾನಿನ ವಿದೇಶ ಸಚಿವ ಮುಹಮ್ಮದ್ ಜವಾದ ಸಾರಿಫ್ ಹೇಳಿದರು. ದೋಹದಲ್ಲಿ ಪತ್ರಕರ್ತರೊಂದಿಗೆ ಅವರು ಮಾತಾಡುತ್ತಿದ್ದರು.

ವಲಯದ ಅತಿದೊಡ್ಡ ಭಯೋತ್ಪಾದಕರನ್ನು ಅಮೆರಿಕ ಬೆಂಬಲಿಸುತ್ತಿದೆ. ಅದು ಇಸ್ರೇಲ್ ಆಗಿದೆ ಎಂದು ಸಾರಿಫ್ ಹೇಳಿದರು. ಡೊನಾಲ್ಡ್ ಟ್ರಂಪ್ ಈಜಿಪ್ಟಿನ ಅತಿದೊಡ್ಡ ಇಸ್ಲಾಮಿಕ್ ಸಂಘಟನೆ ಮುಸ್ಲಿಂ ಬ್ರದರ್‍ಹುಡ್‍ನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ ಎಂದು ಘೋಷಿಸಿದ್ದಾರೆ. ಸಂಘಟನೆಗೆ ದಿಗ್ಬಂಧನ ಹೇರಲಾಗುವುದು ಎಂದು ವೈಟ್ ಹೌಸ್ ಮೂಲಗಳನ್ನು ಉದ್ಧರಿಸಿ ವರದಿಯಾಗಿವೆ.