ಉಯುಗುರ್ ಮುಸ್ಲಿಮರ ಮೇಲೆ ನಿಗಾ ಇರಿಸಲು ಚೀನಾದಿಂದ ಮೊಬೈಲ್ ಆ್ಯಪ್ ಬಳಕೆ

0
481

ಬೀಜಿಂಗ್,ಮೇ3: ಉಯಿಗುರ್ ಮುಸ್ಲಿಮರ ಮೇಲೆ ನಿಗಾ ಇರಿಸಲು ಚೀನದ ಪೊಲೀಸರು ಮೊಬೈಲ್ ಆಪ್ ಉಪಯೋಗಿಸುತ್ತಿದ್ದಾರೆಂದು ವರದಿಯಾಗಿದೆ. ಚೀನದಲ್ಲಿನ ಅಲ್ಪಸಂಖ್ಯಾತ ಮುಸ್ಲಿಂ ವಂಶೀಯರ ವಿವರ ಸಂಗ್ರಹಿಸಲು ಪೊಲೀಸರು ಅಪ್ಲಿಕೇಶನ್ ಉಪಯೋಗಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆ ಹ್ಯೂಮನ್ ರೈಟ್ ವಾಚ್ ಹೇಳಿದೆ. ವ್ಯಕ್ತಿಗಳ ಮುಖ ಗುರುತಿಸುವ ವ್ಯವಸ್ಥೆ, ಎತ್ತರ, ತೂಕ, ಇತ್ಯಾದಿ ವಿವರಗಳನ್ನು ಆಪ್ ಮೂಲಕ ಸಂಗ್ರಹಿಸಲಾಗುತ್ತಿದೆ. ಚೀನದ 36 ವಿಭಾಗಗಳ ವಿರುದ್ಧ ಅತಿಸೂಕ್ಷ್ಮವಾಗಿ ಅಧ್ಯಯನ ನಡೆಸಲಾಗುತ್ತಿದೆ ಎಂದು ಹ್ಯೂಮನ್ ರೈಟ್ ವಾಚ್ ವರದಿ ತಿಳಿಸಿದೆ. ಗುರುವಾರ ಶಿಂಜಿಯಾಂಗ್ ಪ್ರಾಂಥದ ಅಧಿಕಾರಿಗಳು ವಿವರ ನೀಡಿದ್ದು ಉಯುಗುರ್ ವಂಶೀಯರ ಜನಸಂಖ್ಯೆ ನಿಯಂತ್ರಿಸುವುದು ಮತ್ತು ಇವರ ಚಟುವಟಿಕೆಗಳ ಮೇಲೆ ಮುಂಚಿತವಾಗಿ ನಿಗಾವಿರಿಸುವುದು ಪೊಲೀಸರ ಉದ್ದೇಶವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.