ಒಡಿಸ್ಸದಲ್ಲಿ ಫ್ಯಾನಿ ಚಂಡಮಾರುತ: ಲಕ್ಷಾಂತರ ಮಂದಿಯ ಸ್ಥಳಾಂತರ

0
515

ಪುರಿ,ಮೇ 3: ಒಡಿಸ್ಸ ಕರಾವಳಿಗೆ ಫ್ಯಾನಿ ಚಂಡಮಾರುತ ಅಪ್ಪಳಿಸಿದೆ. ಇಂದು ಬೆಳಗ್ಗೆ ಎಂಟು ಗಂಟೆಗೆ ಕರಾವಳಿಯಲ್ಲಿ 175 ಕಿಲೊಮೀಟರ್ ವೇಗದಲ್ಲಿ ಗಾಳಿಬೀಸಲು ತೊಡಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಅತಿತೀವ್ರ ಚಂಡಮಾರುತವಾಗಿ ಪರಿವರ್ತನೆಯಾಗಿರುವ ಫ್ಯಾನಿ ಕರಾವಳಿಯಲ್ಲಿ ಭಾರೀ ನಾಶನಷ್ಟ ಮಾಡುತ್ತಿದೆ. ಗಾಳಿಯೊಂದಿಗೆ ತೀವ್ರ ಮಳೆ ಕೂಡ ಸುರಿದಿದೆ. ಆಂಧ್ರ ಪ್ರದೇಶ, ಪಶ್ಚಿಮಬಂಗಾಳ ಕರಾವಳಿಯಲ್ಲಿ ಗಾಳಿ ಮಳೆ ಬಲವಾಗಿ ಸುರಿಯುತ್ತಿದ್ದು ಮರಗಳ ಕಾಂಡಗಳು ಬುಡಮೇಲಾಗಿ ಬಿದ್ದಿವೆ. ಒಡಿಸ್ಸ ಕರಾವಳಿಯಲ್ಲಿ ವಾಸವಿರುವ ಜನರನ್ನು ತೆರವುಗೊಳಿಸಲಾಗಿದ್ದು ಎತ್ತರ ಪ್ರದೇಶಗಳಿಗೆ ಸ್ಥಳಾಂತರ ಗೊಳಿಸಲಾಗಿದೆ. ಮನೆಯಿಂದ ಯಾರೂ ಹೊರಬರಬಾರದೆಂದು ಸರಕಾರ ಪ್ರಕಟಣೆ ಹೊರಡಿಸಿದೆ. ಎರಡು ಗಂಟೆಗಳ ಕಾಲ ಚಂಡಮಾರತ ಅಬ್ಬರ ಇರಬಹುದು ಎನ್ನಲಾಗುತ್ತಿದೆ. ಭುವನೇಶ್ವರದಿಂದ ವಿಮಾನ ಹಾರಾಟವನ್ನು ಮಧ್ಯರಾತ್ರೆಯಿಂದಲೇ ರದ್ದು ಪಡಿಸಲಾಗಿದೆ. ಕೊಲ್ಕತಾದ ವಿಮಾನಗಳು ಬೆಳಗ್ಗಿನಿಂದ ಶನಿವಾರ ಸಂಜೆ ಆರುಗಂಟೆಯವರೆಗೆ ರದ್ದುಪಡಿಸಲಾಗಿದೆ. ಈಸ್ಟ್‌ಕೋಸ್ಟ್ ರೈಲು ಸಂಚಾರವನ್ನು ಕೂಡ ರದ್ದುಪಡಿಸಲಾಗಿದೆ. ನಿನ್ನೆ ಪ್ರವಾಸಿಗಳನ್ನು ತೆರವುಗೊಳಿಸಲು ಮೂರು ವಿಶೇಷ ರೈಲು ಸಂಚಾರ ವ್ಯವಸ್ಥೆ ಮಾಡಲಾಗಿತ್ತು.