ಸನ್ಮಾರ್ಗ ವಾರ್ತೆ
ಕುದ್ರೋಳಿ :- ಆಗಸ್ಟ್ 19 ರಂದು ಮೂರು ವಿದ್ಯಾರ್ಥಿಗಳನ್ನು ಅಪಹರಿಸಿ ನಟೋರಿಯಸ್ ಗ್ಯಾಂಗ್ ಮಾಡಿದ ಹಲ್ಲೆಯನ್ನು ಮುಸ್ಲಿಂ ಐಕ್ಯತಾ ವೇದಿಕೆಯು ಖಂಡಿಸುತ್ತದೆ.
ಘಟನೆ ನಡೆದ ವಿಷಯವನ್ನು ತಿಳಿದ ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ಬೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾಹಿತಿಯನ್ನು ಪಡೆದು ಸಾಂತ್ವನ ನೀಡಲಾಯಿತು. ಮುಂದಿನ ಭಾಗವಾಗಿ ಇಂದು ಮಧ್ಯಾಹ್ನ ಪಾಂಡೇಶ್ವರ ಪೋಲಿಸ್ ಠಾಣೆಗೆ ಭೇಟಿ ನೀಡಿ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕೃತ್ಯವೆಸಗಿದವರ ವಿರುಧ್ಧ ಯಾವುದೇ ಮುಲಾಜಿ ಇಲ್ಲದೆ ಕಾನೂನು ರೀತಿಯಲ್ಲಿ ಕ್ರಮ ಮತ್ತು ಅವರು ವ್ಯಾಸಾಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಯಿಂದ ಕೂಡಲೇ ಡಿಬಾರ್ ಮಾಡಲು ಮನವಿ ಮಾಡಲಾಯಿತು.
ನಿಯೋಗದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯಾಸೀನ್ ಕುದ್ರೋಳಿ, ಅಶ್ರಫ್ ಕೆ.ಇ ಕಾರ್ಯದರ್ಶಿ ಹಾಜಿ ಬಿ ಅಬೂಬಕ್ಕರ್ ಕಾರ್ಪೋರೇಟರ್ ಶಂಸುದ್ದೀನ್, ಅಶ್ರಫ್ ಮಾಸ್, ಲತೀಫ್ ಕ್ರಿಸ್ಟಲ್ ಮತ್ತು ಬಶೀರ್ ಉಪಸ್ಥಿತರಿದ್ದರು.












