ಇಸ್ಲಾಮ್ ವಿರೋಧಿ ಹೇಳಿಕೆ: ಆಸ್ಟ್ರೇಲಿಯದಲ್ಲಿ ಆಡಳಿತ ಪಾರ್ಟಿ ನಾಯಕನ ಉಚ್ಚಾಟನೆ

0
581

ಮೆಲ್ಬರ್ನ್,ಮೇ 4: ಆಸ್ಟ್ರೇಲಿಯದಲ್ಲಿ ಇಸ್ಲಾಂ ವಿರೋಧಿ ಹೇಳಿಕೆ ನೀಡಿದ ಜೆರಮಿ ಹೀನ್‍ರನ್ನು ಪಾರ್ಟಿಯಿಂದ ಉಚ್ಚಾಟಿಸಲಾಗಿದೆ. ಜೆರೆಮಿ ಹೀನ್ ಸಂಸತ್ತಿಗೆ ಆಡಳಿತ ಪಕ್ಷದ ಅಭ್ಯರ್ಥಿಯಾಗಿದ್ದರು. ಅವರ ಇಸ್ಲಾಮೊಫೋಬಿಯ ಹೇಳಿಕೆಗಾಗಿ ಲಿಬರಲ್ ಪಾರ್ಟಿ ಈ ಕ್ರಮ ಕೈಗೊಂಡಿದೆ. ಆಸ್ಟ್ರೇಲಿಯದ ಮುಸ್ಲಿಮೇತರರನ್ನು  ಒಂದು ಕೊಲ್ಲುವುದು ಅಥವಾ ಗುಲಾಮರನ್ನಾಗಿ ಮಾಡುವುದು ಆಸ್ಟ್ರೇಲಿಯದ ಮುಸ್ಲಿಮರ ಉದ್ದೇಶವಾಗಿದೆ ಎಂದು ಅವರು ಹೇಳಿದ್ದರು. ಆನ್‍ಲೈನ್ ಮ್ಯಾಗಝಿನ್‍ಗೆ ನೀಡಿದ ಸಂದರ್ಶನದಲ್ಲಿ ಅವರು ಈ ರೀತಿ ಮಾತಾಡಿದ್ದಾರೆ. ನಂತರ ಪಾರ್ಟಿ ಅವರನ್ನು ಉಚ್ಚಾಟಿಸಲಾಗಿದೆ ಎಂದು ತಿಳಿಸಿತು. ನಂತರ ಅವರು ತನ್ನ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಿದ್ದಾರೆ.