ಕಲ್ಲಿಕೋಟೆ,ಮೇ 4: ಕೇರಳದಲ್ಲಿ ರಮಝಾನ್ ಒಂದು ಸೋಮವಾರವಾಗಲಿದೆ ಎಂದು ಕೇರಳ ಹಿಲಾಲ್ ಕಮಿಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. 2019 ಮೇ ನಾಲ್ಕಕ್ಕೆ(1440 ಶಅಬಾನ್ 29ಕ್ಕೆ) ಶನಿವಾರದಂದು ಸೂರ್ಯ ಅಸ್ತಮಾನದ ಮೊದಲು ಚಂದ್ರ ಅಸ್ತಮಿಸುವುದರಿಂದ ಅಂದು ಚಂದ್ರೋದಯವನ್ನು ನೋಡಲು ನಮ್ಮಿಂದ ಸಾಧ್ಯವಿಲ್ಲ. ಆದ್ದರಿಂದ ಶಅಬಾನ್ 30ನ್ನು ಪೂರ್ತಿಗೊಳ್ಳುತ್ತದೆ. ಆದ್ದರಿಂದ ಮೇ 6ರಂದು ಸೋಮವಾರ ರಮಝಾನ್ ತಿಂಗಳ ಒಂದು(ಪ್ರಥಮ ದಿನ) ಆಗಲಿದೆ ಎಂದು ಕೇರಳ ಹಿಲಾಲ್ ಕಮಿಟಿ ಅಧ್ಯಕ್ಷ ಎಂ ಮುಹಮ್ಮದ್ ಮದನಿ ತಿಳಿಸಿದ್ದಾರೆ.












