ವೆಲ್ಲಿಂಗ್ಟನ್,ಮೇ 4: ನ್ಯೂಝಿಲೆಂಡಿನ ಕ್ರೈಸ್ಟ್ ಚರ್ಚ್ ಭಯೋತ್ಪಾದನಾ ದಾಳಿಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ 46 ವರ್ಷದ ಟರ್ಕಿ ಪ್ರಜೆ ನಿಧನರಾಗಿದ್ದಾರೆ. ಮಾರ್ಚ್ ಹದಿನೈದರಂದು ನಡೆದ ಭಯೋತ್ಪಾದನಾ ದಾಳಿಯಲ್ಲಿ ಗಾಯಗೊಂಡಿದ್ದರು. ಇವರು ನಮಾಝ್ನಲ್ಲಿ ಭಾಗವಹಿಸಿದ್ದಾಗ ದಾಳಿ ನಡೆದಿತ್ತು. ಚಿಂತನಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಮಸೀದಿಗಳಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 50 ಮಂದಿ ಮುಸ್ಲಿಮರು ಮೃತಪಟ್ಟಿದ್ದರು. 40 ಮಂದಿ ಗಾಯಗೊಂಡಿದ್ದರು. ಇವರ ನಿಧನದೊಂದಿಗೆ ಹತ್ಯೆಗೊಳಗಾದವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ ಎಂದು ನ್ಯೂಝಿಲೆಂಡ್ ಪ್ರಧಾನಿ ಜಸಿಂತಾ ಆರ್ಡನ್ ಅಧಿಕೃತವಾಗಿ ತಿಳಿಸಿದ್ದಾರೆ.












