ದೋಹ,ಮೇ 4: ಈ ವರ್ಷದ ರಮಝಾನ್ ಉಪವಾಸದ ಅವಧಿ ಕತರ್ನಲ್ಲಿ ಹದಿನೈದು ಗಂಟೆಗಳ ಕಾಲ ಇರುತ್ತದೆ. ಕನಿಷ್ಠ ಎಂದರೆ 14 ಗಂಟೆ 38 ನಿಮಿಷವಾಗಿದೆ. ರಮಝಾನ್ನ ಮೊದಲ ದಿನಗಳಲ್ಲಿ ಸ್ವಲ್ಪ ಕಡಿಮೆ ಸಮಯ ಉಪವಾಸದ ಅವಧಿಯಿದೆ. ಕತರ್ ಕ್ಯಾಲಂಡರ್ ಹೌಸ್ನ ವಿಜ್ಞಾನಿ ಡಾ. ಬಶೀರ್ ಮರ್ಸೂಕ್ ಈ ವಿಷಯವನ್ನು ತಿಳಿಸಿದರು. ರಮಝಾನ್ ಕೊನೆಯ ದಿವಸಗಳಲ್ಲಿ ಹಗಲು ದೀರ್ಘವಾಗಲಿದೆ. ಅರಬ್, ಇಸ್ಲಾಮಿಕ್ ದೇಶಗಳಲ್ಲಿ ಪ್ರತಿ ದಿವಸವೂ ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ಸಮಯ ಬದಲಾಗುವುದರಿಂದ ಉಪವಾಸದ ಸಮಯದಲ್ಲಿ ಬದಲಾವಣೆ ಆಗಲಿದೆ. ಈ ವರ್ಷ ಯುರೋಪಿನ ಮುಸ್ಲಿಮರು ಹೆಚ್ಚು ದೀರ್ಘ ಸಮಯ ಉಪವಾಸ ಇರಿಸಬೇಕಾಗಿದೆ. ನೋರ್ವೆ ಮತ್ತು ಸ್ವೀಡನ್ನಲ್ಲಿ ಮುಸ್ಲಿಮರು ಸುಮಾರು 20 ಗಂಟೆ ಉಪವಾಸ ಆಚರಿಸಬೇಕಾಗುತ್ತದೆ. ಡೆನ್ಮಾರ್ಕ್, ಜರ್ಮನಿಗಳಲ್ಲಿ 19 ಗಂಟೆ, ಫ್ರಾನ್ಸಿನಲ್ಲಿ 18 ಗಂಟೆ ಉಪವಾಸ ಆಚರಿಸಬೇಕಾಗಿದೆ. ಅತ್ಯಂತ ಕಡಿಮೆ ಉಪವಾಸದ ಸಮಯ ಸುಮಾರು ಹನ್ನೊಂದು ಗಂಟೆ ಅರ್ಜೆಂಟೀನದಲ್ಲಿದೆ.












