ತಿರುವನಂತಪುರಂ,ಮೇ 6: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಿಂದ ಉದ್ಘಾಟನೆಯಾಗಬೇಕಿದ್ದ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗ ಅನುಮತಿ ನಿರಾಕರಿಸಿದೆ. ಕನ್ಸ್ಯುಮರ್ ಫೆಡ್ನ ಸ್ಟೂಡೆಂಟ್ಸ್ ಮಾರ್ಕೆಟಿಂಗ್ ಉದ್ಘಾಟನೆಯನ್ನು ಕೇರಳ ಮುಖ್ಯ ಚುನಾವಣಾಧಿಕಾರಿ ಢೀಕಾರಾಂ ಮೀನ ನಿರಾಕರಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಸರಕಾರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಯೋಗದ ಅನುಮತಿಗಾಗಿ ಮನವಿ ಸಲ್ಲಿಸಿತ್ತು. ಇದಕ್ಕೆ ಉತ್ತರವಾಗಿ ಆಯೋಗ ಕಾರ್ಯಕ್ರಮ ನಿಷೇಧಿಸದ ವಿವರವನ್ನು ನೀಡಿದೆ. ಮತದಾನ ಮುಗಿದಿದ್ದರೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ ಆದ್ದರಿಂದ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗದು ಎಂದು ಆಯೋಗ ಹೇಳಿದೆ. ತಿರುವನಂತಪುರಂ ಸ್ಟಾಟ್ಯುವಿನಲ್ಲಿ ಸಂಜೆ ಕನ್ಸ್ಯೂಮರ್ ಫೆಡ್ನ ಸ್ಟೂಡೆಂಟ್ಸ್ ಮಾರ್ಕೆಟಿಂಗನ್ನು ಮುಖ್ಯಮಂತ್ರಿ ಉದ್ಘಾಟಿಸುವವರಿದದರು. ಇಂದಿನಿಂದ ಜೂನ್ ಮೂವತ್ತರವರೆಗೆ ಕೇರಳದ ಆಯ್ದ ಕೇಂದ್ರಗಳಲ್ಲಿ ಸ್ಟೂಡೆಂಟ್ಸ್ ಮಾರ್ಕೆಟಿಂಗ್ ಆರಂಭಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿಯಲ್ಲದೆ ಸಹಕಾರ ಸಚಿವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು.












