ಬಿಹಾರದಲ್ಲಿ ಮತಯಂತ್ರ ನೆಲಕ್ಕಪ್ಪಳಿಸಿದ ರಂಜಿತ್ ಪಾಸ್ವಾನ್; ಪ.ಬಂಗಾಳದಲ್ಲಿ ಕೆಟ್ಟು ನಿಂತ ಮತಯಂತ್ರಗಳು

0
487

ಪಾಟ್ನ,ಮೇ 6: ಐದನೇ ಹಂತದ ಲೋಕಸಭಾ ಚುನಾವಣೆ ನಡೆಯುವ ಬಿಹಾರದ ಒಂದು ಮತಗಟ್ಟೆಯಲ್ಲಿ ಮತಯಂತ್ರವನ್ನು ನೆಲಕ್ಕಪ್ಪಳಿಸಿ ಪುಡಿಗುಟ್ಟಲಗಿದೆ. ಚಾಪ್ರ ಎಂಬಲ್ಲಿನ 131ನೆ ಬೂತ್‍ನ ಮತಯಂತ್ರವನ್ನು ರಂಜಿತ್ ಪಾಸ್ವಾನ್ ಎಂಬಾತ ಪುಡಿಗುಟ್ಟಿದನು. ಪೊಲೀಸರು ಈತನನ್ನು ಬಂಧಿಸಿದರು. ಇತ್ತ ನೆರೆಯ ಪಶ್ಚಿಮ ಬಂಗಾಳದಲ್ಲಿ ಕೆಲವು ಮತಗಟ್ಟೆಯಲ್ಲಿ ಇಲೆಕ್ಟ್ರಿಕ್ ಮತಯಂತ್ರಗಳು ಕೆಟ್ಟು ನಿಂತು ಹೋಗಿವೆ. ಹೌರಾದ ಸಲ್ಕಿಯ ಕ್ಷೇತ್ರದ ಮೂರು ಮತಗಟ್ಟೆಗಳ ಯಂತ್ರಗಳು ಹಾಳಾದವು. ಇಲ್ಲಿ ಮತದಾನ ಆರಂಭಿಸಲು ಸಾಧ್ಯವಾಗಿಲ್ಲ. ಮತಯಂತ್ರ ರಿಪೇರಿಗೆ ಹೆಚ್ಚು ಸಮಯ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು.