ಅಮೇಠಿಯಲ್ಲಿ ಕಾಂಗ್ರೆಸ್‍ನಿಂದ ಮತಗಟ್ಟೆ ವಶ- ಸ್ಮೃತಿ ಇರಾನಿ ಆರೋಪ

0
493

ಲಕ್ನೊ,ಮೇ 6: ಮತದಾನ ನಡೆಯುವ ವೇಳೆ ಕಾಂಗ್ರೆಸ್ ಮತಗಟ್ಟೆ ವಶಕ್ಕೆ ಪಡೆಯುತ್ತಿದೆ ಎಂದು ಅಮೇಠಿಯ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಆರೋಪಿಸಿದ್ದಾರೆ. ಇದಕ್ಕೆ ದಾಖಲೆಯಾಗಿ ಒಂದು ವೀಡಿಯೊವನ್ನು ಕೂಡ ಹೊರಬಿಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿಗೆ ಮನುಷ್ಯತ್ವವಿಲ್ಲ. ರಾಹುಲ್ ಪೋಷಕರಾಗಿರುವ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನಿರಾಕರಿಸಲ್ಪಟ್ಟು ಓರ್ವರು ಮೃತಪಟ್ಟರು. ರಾಜಕೀಯ ಲಾಭಕ್ಕಾಗಿ ಇಲ್ಲಿ ಏನೆಲ್ಲ ನಡೆಯುತ್ತಿವೆ ಎಂದು ಸ್ಮೃತಿ ಹೇಳಿದರು. ಇಂದು ಮತದಾನ ದಿನವಾಗಿಯೂ ರಾಹುಲ್ ಗಾಂಧಿ ಅಮೇಠಿಗೆ ಬಂದಿಲ್ಲ. ಅಮೇಠಿಗೆ ರಾಹುಲ್ ಯಾಕೆ ಬರಲಿಲ್ಲ ಎಂದು ಕಾಂಗ್ರೆಸ್ ನಾಯಕರು ಜನರಿಗೆ ಸ್ಪಷ್ಟಪಡಿಸಬೇಕೆಂದು ಸ್ಮೃತಿ ಇರಾನಿ ಹೇಳಿದರು.