ಲಕ್ನೊ,ಮೇ 6: ಉತ್ತರ ಪರದೇಶದ ಮಹಾಘಟ್ಬಂಧನ್ ಬಿಜೆಪಿಗೆ ಸವಾಲಲ್ಲ ಎಂದು ಕೇಂದ್ರ ಸಚಿವ ರಾಜ್ನಾಥ್ ಸಿಂಗ್ ಹೇಳಿದರು. ಲಕ್ನೊ 1991ರಿಂದ ಬಿಜೆಪಿ ಜೊತೆಗಿರುವ ಲೋಕಸಭಾ ಕ್ಷೇತ್ರವಾಗಿದೆ. ಆದ್ದರಿಂದ ನನ್ನ ಗೆಲುವಿಗೆ ಯಾವುದೇ ರೀತಿಯ ಸವಾಲುಗಳಿಲ್ಲ. ಮಿಕ್ಕುಳಿದುದು ಮತದಾರರ ವಿವೇಚನೆಗೆ ಬಿಟ್ಟಿದ್ದೇನೆ ಎಂದರು. ಸಮಾಜವಾದಿ ಪಾರ್ಟಿ, ಬಿಎಸ್ಪಿ, ಆರ್ಜೆಡಿ ಸಖ್ಯದ ಅಭ್ಯರ್ಥಿಯಾಗಿ ಶತ್ರುಘ್ನ ಸಿನ್ಹಾರ ಪತ್ನಿ ಪೂನಂ ಸಿನ್ಹ ಲಕ್ನೊದಿಂದ ಸ್ಪರ್ಧಿಸುತ್ತಿದ್ದಾರೆ. ಪೂನಂ ಸಿನಾರ ಕುರಿತು ಪ್ರತಿಕ್ರಿಯಿಸುವುದಿಲ್ಲ. ಚುನಾವಣಾ ಹೋರಾಟ ಇಬ್ಬರು ವ್ಯಕ್ತಿಗಳ ನಡುವಿನದಲ್ಲ. ಬದಲಾಗಿ ಎರಡು ಆಶಯಗಳ ನಡುವಿನದ್ದೆಂದು ರಾಜ್ನಾಥ್ ಸಿಂಗ್ ಹೇಳಿದರು.
2014ರಲ್ಲಿ ಲಕ್ನೊದಿಂದ ರಾಜ್ನಾಥ್ ಸಿಂಗ್ಗೆ 5.61 ಲಕ್ಷ ಮತ ಸಿಕ್ಕಿತ್ತು. ಕಾಂಗ್ರೆಸ್ ಮತ್ತು ಮಹಾಸಖ್ಯಕ್ಕೆ 4.09 ಲಕ್ಷ ಮತಗಳು ಸಿಕ್ಕಿದ್ದವು. ಈ ಲೆಕ್ಕ ನೋಡಿದರೂ ಬಿಜೆಪಿಗೆ ಅವು ಸವಾಲೇ ಅಲ್ಲ. ಮಾತ್ರವಲ್ಲ ಬಿಹಾರದಲ್ಲಿ ಶತ್ರುಘ್ನ ಸಿನ್ಹಾ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದರೂ ಮಹಾಸಖ್ಯದ ಅಭ್ಯರ್ಥಿ ಪೂನಂರನ್ನು ಕಾಂಗ್ರೆಸ್ ಬೆಂಬಲಿಸಿಲ್ಲ.












