ಗುಜರಾತ್‌: ಸೋಮನಾಥ ದೇವಸ್ಥಾನದ ಬಳಿ ಮಸೀದಿ, ದರ್ಗಾ ಮತ್ತು ಸ್ಮಶಾನ ಧ್ವಂಸ: ಜಮಾಅತೆ ಇಸ್ಲಾಮೀ ಹಿಂದ್ ಖಂಡನೆ

0
229

ಸನ್ಮಾರ್ಗ ವಾರ್ತೆ

ಗುಜರಾತ್ ನ ಸೋಮನಾಥ್ ದೇವಾಲಯದ ಹತ್ತಿರ ಇರುವ ಮಸೀದಿ ದರ್ಗಾ ಮತ್ತು 500 ವರ್ಷಗಳಷ್ಟು ಹಳೆಯದಾದ ಕಬರಸ್ಥಾನವನ್ನು ಅಧಿಕಾರಿಗಳು ಧ್ವಂಸಗೊಳಿಸಿರುವುದನ್ನು ಜಮಾಅತೆ ಇಸ್ಲಾಮಿ ಹಿಂದ್ ತೀವ್ರವಾಗಿ ಖಂಡಿಸಿದೆ. ಇದು ಅತ್ಯಂತ ಯೋಜಿತ ಸಂಚಾಗಿದ್ದು ಸುಪ್ರೀಂ ಕೋರ್ಟ್ ನ ತೀರ್ಪನ್ನು ಬರ್ಬರವಾಗಿ ಉಲ್ಲಂಘಿಸಿದ ಕೃತ್ಯವಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಮಲಿಕ್ ಮುಹ್ ತಸಿಮ್ ಖಾನ್ ಹೇಳಿದ್ದಾರೆ.

ಈ ಕೃತ್ಯವು ಸೆಪ್ಟಂಬರ್ 28ರಂದು ನಡೆದಿದೆ. ಇದಕ್ಕಿಂತ 10 ದಿನಗಳ ಮೊದಲು ಸುಪ್ರೀಂಕೋರ್ಟು ಇಂತಹ ದ್ವಂಸ ಕಾರ್ಯದ ಬಗ್ಗೆ ಖಡಕ್ ಎಚ್ಚರಿಕೆ ನೀಡಿತ್ತು. ತನ್ನ ಪರ್ಮಿಷನ್ ಇಲ್ಲದೆ ಯಾವುದೇ ಬುಲ್ಡೋಜರ್ ಕೃತ್ಯವನ್ನು ನಡೆಸಬಾರದು ಎಂದು ಸುಪ್ರೀಂ ಕೋರ್ಟು ಆದೇಶಿಸಿತ್ತು. ಆದರೆ ಸುಪ್ರೀಂ ಕೋರ್ಟ್ ನ ಆದೇಶವನ್ನೇ ಇಲ್ಲಿ ಲೆಕ್ಕಿಸಲಾಗಿಲ್ಲ ಎಂದವರು ಹೇಳಿದ್ದಾರೆ.

ಅಭಿವೃದ್ಧಿ ನಡೆಯಬೇಕು ಅನ್ನುವುದು ಸರಿ. ಆದರೆ ಇಂತಹ ಅಭಿವೃದ್ಧಿಗಾಗಿ ಕಟ್ಟಡ ನಾಶ ಮಾಡುವ ಮೊದಲು ಸಂಬಂಧಿತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗಿದೆ. ಮಾತ್ರ ಅಲ್ಲ ನಿರ್ದಿಷ್ಟ ಸಮುದಾಯದ ಭಾವನೆಗಳನ್ನೇ ಕಡೆಗಣಿಸಿ ಸಂಚಿನಿಂದ ಅವರ ಧಾರ್ಮಿಕ ಕೇಂದ್ರಗಳನ್ನು ಧ್ವಂಸಗೊಳಿಸುವುದು ಕ್ಷಮಾರ್ಹವಲ್ಲ ಎಂದವರು ಹೇಳಿದ್ದಾರೆ.