ಹೊಸದಿಲ್ಲಿ,ಮೇ 7: ಲೋಕಸಭಾ ಚುಣಾವಣೆಯ ಐದನೆ ಹಂತ ಮುಗಿದಾಗ ಸರಕಾರ ರಚಿಸುವ ಕುರಿತು ಸಖ್ಯ ಯತ್ನಗಳೊಂದಿಗೆ ಅನೇಕ ರಾಜಕೀಯ ನಾಯಕರು ಮುಂದೆ ಬಂದಿದ್ದಾರೆ. ಯಾವ ಪಕ್ಷಕ್ಕೂ ಬಹುಮತ ಸಿಗಲಾರದು ಎಂದು ಬಿಜೆಪಿ ಬಹಿರಂಗವಾಗಿ ಘೋಷಿಸಿದ್ದು ಎನ್ಡಿಎಯ ಸಖ್ಯದಲ್ಲಿಲ್ಲದ ಬಿಜು ಜನತಾದಳ ನಾಯಕ ನವೀನ್ ಪಟ್ನಾಯಕರ್ರನ್ನು ಚುನಾವಣಾ ಫಲಿತಾಂಶದ ಮೊದಲೇ ಪ್ರಧಾನಿ ಮೋದಿ ಹೊಗಳಿದ್ದಾರೆ. ಚುನಾವಣೆಯ ಮೊದಲು ಬಿಜೆಪಿ ಕಾಂಗ್ರೆಸ್ ಹೊರತಾದ ಮಊರನೆ ರಂಗಕ್ಕೆ ಶ್ರಮಿಸಿದ ತೆಲಂಗಾಣ ಮುಖ್ಯ ಮಂತ್ರಿ ಚಂದ್ರಶೇಖರರಾವ್, ಸಿಪಿಎಂ ನಾಯಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಹಾಗೂ ಡಿಎಂಕೆ ನಾಯಕ ಎಂಕೆ ಸ್ಟಾಲಿನ್ರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.
ಹಿಂದಿ ಭಾಷಿಗರ ಹೃದಯ ಭೂಮಿಯಲ್ಲಿ ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಚುನಾವಣೆಯ ಐದನೇ ಹಂತಕ್ಕೆ ತಲುಪಿದಾಗ ಈ ಹಿಂದೆ ನಡೆಸಿದ ಹಕ್ಕುವಾದಗಳಿಂದ ಬಿಜೆಪಿ ಹಿಂದೆ ಸರಿದಿದೆ. 543 ಸದಸ್ಯರ ಲೋಕಸಭೆಯಲ್ಲಿ ಬಹುಮತ ಸಿಗಲಾರದು. ಸಖ್ಯ ಪಕ್ಷಗಳ ಬೆಂಬಲ ಬಿಜೆಪಿಗೆ ಅಗತ್ಯವಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆಯ ಪ್ರಚಾರ ಆರಂಭಗೊಂಡ ಬಳಿಕ ಮೊದಲ ಬಾರಿ ಬಿಜೆಪಿ ಏಕೈಕ ಬಹುಮತ ಹೊಂದಿದ ಪಾರ್ಟಿಯಾಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಬಿಜೆಪಿ ಒಪ್ಪಿಕೊಂಡಿದೆ. ಎರು ಹಂತದ ಚುನಾವಣೆ ಮುಗಿಯಲು ಎರಡು ವಾರಗಳು ಬಾಕಿಯಿವೆ. 271 ಸೀಟುಗಳು ಸಿಕ್ಕಿದರೆ ಸಂತಸ ಪಡುತ್ತೇವೆ. ಘಟಕ ಪಕ್ಷಗಳ ಸಹಕಾರದಲ್ಲಿ ಸರಕಾರ ರಚಿಸುತ್ತೇವೆ ಎಂದು ರಾಮ್ ಮಾಧವ್ ಹೇಳಿದರು. ಪೂರ್ವ ಭಾರತದಲ್ಲಿ ಪಾರ್ಟಿ ತನ್ನ ಅಸ್ತಿತ್ವವನ್ನು ಬಲಪಡಿಸಿದೆ ಎಂದು ಅವರು ಹೇಳಿದರು.
ಅದೇ ರೀತಿ ಕೆಲಸ ಮಾಡಿದ್ದರೆ ದಕ್ಷಿಣ ಭಾರತದ ಸ್ಥಿತಿಯೂ ಬಿಜೆಪಿಗೆ ಉತ್ತಮವಾಗಿರುತ್ತಿತ್ತು. ಕಳೆದ ಬಾರಿ ಸಿಕ್ಕಿದ ಸೀಟುಗಳು ಆಡಳಿತ ವಿರೋಧಿ ಭಾವನೆಯಿಂದ ಈ ಸಲ ಸಿಗುವುದಿಲ್ಲ ಎಂದು ರಾಮ್ ಮಾಧವ್ ಹೇಳಿದರು. ಪಾರ್ಟಿ ಅಧ್ಯಕ್ಷ ಅಮಿತ್ ಶಾ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಹಿಂದೆ ಹೇಳಿದ್ದಕ್ಕಿಂತ ಹೆಚ್ಚು ಕೆಳಗೆ ರಾಮ್ ಮಾಧವ್ರ ಸೀಟು ಲೆಕ್ಕವಿದೆ. ರಾಮ್ ಮಾಧವ್ ಹೇಳಿದ ಬಳಿಕ ಫ್ಯಾನಿ ಚಂಡಮಾರುತದ ನಾಶನಷ್ಟವನ್ನು ಲೆಕ್ಕ ಮಾಡಲು ಒಡಿಸ್ಸಕ್ಕೆ ಬಂದ ಪ್ರಧಾನಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ರನ್ನು ಹೊಗಳಿದರು.
ಇದೇ ವೇಳೆ ಫ್ಯಾನಿಯ ವಿವರಗಳನ್ನು ತಿಳಿಯಲು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮೋದಿ ಕರೆ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ. ಮಮತಾ ಅಹಂಕಾರಿಯಾಗಿದ್ದಾರೆ. ಪ್ರಕೃತಿ ದುರಂತವನ್ನುರಾಜಕೀಯದೊಂದಿಗೆ ಬೆರೆಸಿದ್ದಾರೆ ಎಂದು ಮೋದಿ ಆರೋಪಿಸಿದರು. ಆದರೆ ಮೋದಿಯೊಂದಿಗೆ ಮಾತಾಡುವುದಿಲ್ಲ. ಮುಂದಿನ ಹೊಸ ಪ್ರಧಾನಿಯೊಂದಿಗೆ ಮಾತಾಡುತ್ತೇನೆ ಎಂದು ಮಮತಾ ಹೇಳಿದರು. ಇದರ ನಡುವೆ ತ್ರಿಶಂಕು ಪಾರ್ಲಿಮೆಂಟು ಬಂದರೆ ಮೂರನೆ ರಂಗದ ಸರಕಾರ ರಚಿಸುವಕುರಿತು ತೆಲಂಗಾಣದ ಟಿಆರ್ಎಸ್ ನಾಯಕ ಚಂದ್ರಶೇಖರ್ ರಾವ್ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಸಿಪಿಎಂ ನಾಯಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರೊಂದಿಗೆ ಚರ್ಚೆ ನಡೆಸಿದರು. ಡಿಎಂಕೆ ನಾಯಕ ಎಂಕೆ ಸ್ಟಾಲಿನ್ರನ್ನು ಚಂದ್ರ ಶೇಖರ ರಾವ್ ಭೇಟಿಯಾಗಿದ್ದಾರೆ. ಇದೇ ವೇಳೆ ಎನ್ಡಿಎಯ ಹೊರಗೆ ನಿಂತು ಮೃದು ನಿಲುವು ಸ್ವೀಕರಿಸಿದ ಬಿಜು ಜನತಾದಳದಂತೆ ಟಿಆರ್ಎಸ್ನಲ್ಲಿ ಬಿಜೆಪಿ ಕಣ್ಣಿರಿಸಿದೆ.












