ಟಿಪ್ಪು ಸುಲ್ತಾನ್‍ಗೆ ಸ್ಮರಣಾಂಜಲಿ ಅರ್ಪಿಸಿದ ಇಮ್ರಾನ್ ಖಾನ್

0
612

ಇಸ್ಲಾಮಾಬಾದ್,ಮೇ 7: ಗುಲಾಮರಾಗಿರಲು ಬಯಸದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮೃತನಾದ ವೀರ ಆಡಳಿತಗಾರ ಎಂದು ಟಿಪ್ಪು ಸುಲ್ತಾನ ರನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರಶಂಸಿದ್ದಾರೆ. 18 ನೆ ಶತಮಾನದಲ್ಲಿ ಮೈಸೂರು ಸುಲ್ತಾನ್ ಆಗಿದ್ದ ಟಿಪ್ಪು ಪುಣ್ಯ ತಿಥಿಯ ವೇಳೆ ಇಮ್ರಾನ್ ಟಿಪ್ಪುಗೆ ಸ್ಮರಣಾಂಜಲಿ ಸಲ್ಲಿಸಿ ಟ್ವೀಟ್ ಮಾಡಿದರು.ಇಮ್ರಾನ್ ಖಾನ್ ಈ ಹಿಂದೆಯೂ ಟಿಪ್ಪು ಸುಲ್ತಾನನ್ನು ಪ್ರಶಂಸಿದ್ದಾರೆ. ಪುಲ್ವಾಮ ಭಯೋತ್ಪಾದನಾ ದಾಳಿಯಿಂದ ಭಾರತ-ಪಾಕಿಸ್ತಾನ ಸಂಬಂಧ ಕೆಟ್ಟು ಹೋಗಿದ್ದ ಸಂದರ್ಭದಲ್ಲಿ ಸೇರಿದ ಪಾರ್ಲಿಮೆಂಟ್ ಸಭೆಯಲ್ಲಿ ಕೂಡ ಅವರು ಟಿಪ್ಪುವಿನ ಧೈರ್ಯದ ಕುರಿತು ವಿವರಿಸಿದ್ದರು.