ಕ್ಯಾಥೊಲಿಕ್ – ಆರ್ಥೊಡೆಕ್ಸ್ ಕ್ರೈಸ್ತರ ಒಗ್ಗಟ್ಟಿಗೆ ಪೋಪ್‍ರಿಂದ ಶ್ರಮ

0
595

ಸೋಫಿಯ,ಮೇ 8:ಆರ್ಥೊಡೆಕ್ಸ್ ಚರ್ಚ್‌ನೊಂದಿಗೆ ಸಂಬಂಧವನ್ನು ಉತ್ತಮ ಪಡಿಸಲು ಪೋಪ್ ಯುರೋಪ್ ಪ್ರವಾಸ ನಡೆಸುತ್ತಿದ್ದಾರೆ. ಬಲ್ಗೇರಿಯಾ ಮತ್ತು ಉತ್ತರ ಮೆಸಿಡೋನಿಯಕ್ಕೆ ಪೋಪ್‍ರು ತ್ರಿದಿನ ಸಂದರ್ಶನ ನಡೆಸುತ್ತಿದ್ದು, ಎರಡು ದೇಶಗಳಲ್ಲಿ ಕ್ಯಾಥೊಲಿಕ್ ಕ್ರೈಸ್ತರು ಕೆಲವೇ ಸಂಖ್ಯೆಯಲ್ಲಿದ್ದಾರೆ. ರವಿವಾರ ಬಲ್ಗೇರಿಯದ ಆರ್ಥೋಡೆಕ್ಸ್ ನಾಯಕರೊಂದಿಗೆ ಚರ್ಚಿಸಿದರು. ಹದಿನೇಳು ವರ್ಷದಲ್ಲಿ ಮೊದಲ ಬಾರಿ ಕ್ಯಾಥೋಲಿಕ್ ಮುಖ್ಯಸ್ಥರು ಬಲ್ಗೇರಿಯಕ್ಕೆ ಭೇಟಿ ನೀಡುತ್ತಿದ್ದಾರೆ. ರಾಜಧಾನಿ ಸೋಫಿಯದಲ್ಲಿ ಆರ್ಥೊಡೆಕ್ಸ್ ಕ್ಯಾಥೆಡ್ರಲ್‍ಗೆ ಪೋಪ್ ಭೇಟಿ ನೀಡಿದರು. ಆದರೆ ಪೋಪ್‍ರ ಜೊತೆ ಪ್ರಾರ್ಥನೆಯಲ್ಲಿ ಭಾಗಿಯಾಗಲು ಸಾಂಪ್ರದಾಯಿಕ ನಾಯಕರು ಸಿದ್ಧರಾಗಲಿಲ್ಲ. ಚರ್ಚ್ ನಾಯಕ ಪಾಟ್ರಿಯಾರ್ಕ್ ನಿಯೊಫಿತ್‍ರು ಪೋಪ್‍ರೊಂದಿಗೆ ಚರ್ಚಿಸಿದರು.

1054ರಲ್ಲಿ ಕ್ಯಾಥೊಲಿಕ್ ಆರ್ಥೊಡೆಕ್ಸ್ ವಿಭಾಗಗಳು ವಿಭಜನೆಯಾಗಿದ್ದು ಎರಡು ವಿಭಾಗಗಳ ಒಗ್ಗಟ್ಟಿಗೆ ವ್ಯಾಟಿಕನ್ ಬಹಳ ಹಿಂದಿನಿಂದ ಶ್ರಮಿಸುತ್ತಿದೆ. ಬಲ್ಗೇರಿಯದಲ್ಲಿ ಕೇವಲ 58,000 ಕ್ಯಾಥೊಲಿಕರು ಮತ್ತು ಉತ್ತರ ಮೆಸಿಡೋನಿಯದಲ್ಲಿ 15 ಸಾವಿರ ಕ್ಯಾಥೋಲಿಕರು ಮಾತ್ರ ಇದ್ದಾರೆ. ಯುರೋಪಿಯನ್ ಯೂನಿಯನ್‍ನ ಬಡ ದೇಶವಾದ ಬಲ್ಗೇರಿಯದಲ್ಲಿ ಜನನ ದರ ಕಡಿಮೆಯಾಗುವುದು ಮತ್ತು ವಲಸೆಗಾರರ ಕೊರತೆಯಿರುವುದಕ್ಕೆ ಪೋಪ್ ಆತಂಕ ವ್ಯಕ್ತಪಡಿಸಿದರು. ನಿರಾಶ್ರಿತರ ಮುಂದೆ ಕಣ್ಣು, ಹೃದಯ, ಕೈಗಳನ್ನು ಮುಚ್ಚಬಾರದೆಂದು ಪೋಪ್ ಕರೆ ನೀಡಿದರು.ಬಲ್ಗೇರಿಯ ನಿರಾಶ್ರಿತರಿಗೆ ಆಶ್ರಯ ನೀಡಲು ಹಿಂದೇಟು ಹಾಕುತ್ತಿದೆ. 2015ರಲ್ಲಿ 20,000 ಮಂದಿ ಆಶ್ರಯ ಕೋರಿ ಅರ್ಜಿಸಲ್ಲಿಸಿದ್ದರು. ಇದೇ ವೇಳೆ 2018ರಲ್ಲಿ ಕೇವಲ 2500 ಮಂದಿ ಆಶ್ರಯ ಕೋರಿದ್ದಾರೆ. ಯುರೋಪಿಯನ್ ಯೂನಿಯನ್‍ನಲ್ಲಿ ಅತಿ ಹೆಚ್ಚು ಮರಣ ದರ ಇರುವ ದೇಶ ಕೂಡ ಬಲ್ಗೇರಿಯಾ ಆಗಿದೆ. ಗ್ರೀಕ್‍ನೊಂದಿಗೆ ಶತಮಾನಗಳಿಂದ ಮುಂದುವರಿದಿದ್ದ ವಿವಾದ ಕೊನೆಗೊಂಡ ಬಳಿಕ ಪೋಪ್ ಮೊದಲ ಬಾರಿ ಉತ್ತರ ಮೆಸಿಡೊನಿಯಕ್ಕೆ ಭೇಟಿ ನೀಡುತ್ತಿದ್ದಾರೆ.