ದಲಿತ ಯುವಕನಿಗೆ ಮಲ ತಿನ್ನಿಸಿದ ಘಟನೆ: ಇಬ್ಬರ ಬಂಧನ

0
649

ಚೆನ್ನೈ,ಮೇ 8: ದಲಿತ ಯುವಕನಿಗೆ ಬಲವಂತದಿಂದ ಮಲ ತಿನ್ನಿಸಿದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತಿರುವಾರೂರ್ ಜಿಲ್ಲೆಯ ಮನ್ನಾರ್ ಗುಡಿ ತಿರುವಂಡಿತುರ ಗ್ರಾಮದ ಯುವಕನಿಗೆ ಮಲ ತಿನ್ನಿಸಿದರನ್ನೆಲಾದ ಸವರ್ಣೀಯರಾದ ರಾಜೇಶ್, ಶಕ್ತಿವೇಲ್ ಎಂಬವರನ್ನು ಪೊಲೀಸರು ಬಂಧಿಸಿದರು. ಇನ್ನೊಬ್ಬ ಆರೋಪಿ ರಾಜ್‍ಕುಮಾರ್ ತಲೆಮರೆಕೊಂಡಿದ್ದಾನೆ. ಎಪ್ರಿಲ್ 28ಕ್ಕೆ ಮರಕ್ಕೆ ಕಟ್ಟಿಹಾಕಿ ಮಲತಿನ್ನಿಸಲಾಗಿದೆ ಎಂದು ಕೊಟ್ಟೂರ್ ಪೊಲೀಸರಿಗೆ ದೂರು ನೀಡಲಾಗಿತ್ತು. ಐದು ವರ್ಷದ ಹಿಂದೆ ದೇವಸ್ಥಾನವೊಂದಕ್ಕೆ ಸಂಬಂಧಿಸಿದ ಗಲಾಟೆಯ ದ್ವೇಷ ಮಲ ತಿನ್ನಿಸುವ ಘಟನೆಗೆ ಕಾರಣವೆಂದು ವರದಿಯಾಗಿದೆ.