ಸೋಲನ್ನು ಮುಚ್ಚಿಡಲು ಬಿಜೆಪಿ ಮಾತುಗಳನ್ನು ತಿರುಚತೊಡಗಿದೆ- ಕಾಂಗ್ರೆಸ್

0
499

ಹೊಸದಿಲ್ಲಿ,ಮೇ 10: ತಮ್ಮ ಸೋಲನ್ನು ಮುಚ್ಚಿಡಲು ಬಿಜೆಪಿ ಮಾತುಗಳನ್ನು ತಿರುಚತೊಡಗಿದೆ ಎಂದು ಕಾಂಗ್ರೆಸ್‍ನ ಮುಖ್ಯ ರಾಜತಾಂತ್ರಿಕ ತಜ್ಞ ಸ್ಯಾಮ್ ಪಿತ್ರೊಡಾ ಕಟುವಾಗಿ ಟೀಕಿಸಿದರು. 1984ರ ಸಿಖ್ ಸಾಮೂಹಿಕ ಹತ್ಯೆ ಕುರಿತ ಪಿತ್ರೊಡ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿತ್ತು. 1984ರಲ್ಲಿ ನಡೆದದ್ದು ನಡೆಯಿತು ಎಂದು ಅವರು ಹೇಳಿದ್ದರು. ಇದರ ಬೆನ್ನಿಗೆ ಅವರು ಸ್ಪಷ್ಟೀಕರಣದೊಂದಿಗೆ ರಂಗಪ್ರವೇಶಿಸಿದ್ದಾರೆ. ತನ್ನ ಮಾತನ್ನು ಬಿಜೆಪಿ ತಿರುಚುತ್ತಿದೆ. ಕಾಂಗ್ರೆಸಿನೊಳಗೆ ವಿಭಜನೆ ಸೃಷ್ಟಿಸಲು ಅವರು ಶ್ರಮಿಸಿದ್ದಾರೆ. ಧನಾತ್ಮಕವಾಗಿ ಹೇಳುವಂತಹದ್ದೇನೂ ಅವರಲ್ಲಿಲ್ಲ. ಆದ್ದರಿಂದ 1984ರ ಸಾಮೂಹಿಕ ಹತ್ಯೆಯಲ್ಲಿ ಸಿಖ್ ಸಹೋದರರಿಗೆ ಆಗಿರುವ ನೋವು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಮೋದಿ ಸರಕಾರ ಐದು ವರ್ಷ ಏನು ಮಾಡಿತು ಎಂಬುವುದೇ ಈ ಚುನಾವಣೆಯಲ್ಲಿ ಪ್ರಧಾನ ವಿಷಯವಾಗಿದೆ ಎಂದರು. ಸುಳ್ಳು ಪ್ರಚಾರದಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ದಾಳಿ ಮಾಡುತ್ತಿದೆ. ಅವರ ಸಾಧನೆಯ ಕುರಿತು ಏನೂ ಹೇಳುವುದಿಲ್ಲ. ಬಿಜೆಪಿ ಸರಕಾರ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಪಿತ್ರೊಡ ಆರೋಪಿಸಿದರು.